ದೇವರ ಅನುಗ್ರಹ ಪಡೆಯುವಲ್ಲಿ ಪವಿತ್ರ ರಮಝಾನ್ ಉಪವಾಸಕ್ಕೆ ಹೆಚ್ಚು ಮಹತ್ವವಿದೆ: ರಮಾನಾಥ ರೈ
ಬಂಟ್ವಾಳ, ಜೂ. 8: ಭಗವಂತನ ಅನುಗ್ರಹ ಪಡೆಯುವ ನಿಟ್ಟಿನಲ್ಲಿ ಪವಿತ್ರ ರಂಝಾನ್ ಉಪವಾಸಕ್ಕೆ ಹೆಚ್ಚು ಮಹತ್ವವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ "ಸೌಹಾರ್ದ ಇಫ್ತಾರ್ ಕೂಟ"ದಲ್ಲಿ ಮಾತನಾಡಿದ ಅವರು, ಸಾಮಾಜಿಕ ಸಾಮರಸ್ಯ, ಸೌಹಾರ್ದದ ಸಂಕೇತವಾಗಿ ಪ್ರತಿ ವರ್ಷ ಇಫ್ತಾರ್ ಕೂಟ ಏರ್ಪಡಿಸುತ್ತಿದ್ದು, ಸರ್ವಧರ್ಮದ ಬಂಧುಗಳು ಭಾಗವಹಿಸುತ್ತಿದ್ದಾರೆ. ಸಾಮಾಜಿಕ ಸಾಮರಸ್ಯದ ಸಮಾಜ ಕಟ್ಟುವ ನಿಟ್ಟಿನಲ್ಲಿ ಎಲ್ಲರಿಗೂ ಭಗವಂತನ ಪ್ರೇರಣೆಯಾಗಲಿ ಎಂದವರು ಜಿಲ್ಲೆಯಲ್ಲಿ ಸಹೋದರತೆ ಹಾಗೂ ಸಾಮರಸ್ಯ ನೆಲೆ ನಿಲ್ಲಲಿ ಎಂದು ಆಶಯ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್, ಸಾಹುಲ್ ಹಮೀದ್, ಯು.ಪಿ.ಇಬ್ರಾಹಿಂ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ವೇದಿಕೆಯಲ್ಲಿದ್ದರು.
ಮಿತ್ತಬೈಲ್ ಮಸೀದಿಯ ಇರ್ಷಾದ್ ದಾರಿಮಿ ದುವಾಃ ನೆರವೇರಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬೇಬಿ ಕುಂದರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ, ತಾಪಂ, ಪುರಸಭಾ ಕಾಂಗ್ರೆಸ್ ಸದಸ್ಯರಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಸ್ವಾಗತಿಸಿದರು. ರಾಜೀವ ಕಕ್ಕೆಪದವು ನಿರೂಪಿಸಿದರು