600 ಜ್ಯೋತಿರ್ವರ್ಷ ದೂರದ ಗ್ರಹ ಪತ್ತೆ !

Update: 2018-06-08 17:14 GMT
ಸಾಂದರ್ಬಿಕ ಚಿತ್ರ

ಚೆನ್ನೈ, ಜೂ. 8: ಭೂಮಿಗಿಂತ 6 ಪಟ್ಟು ತ್ರಿಜ್ಯ ಹೊಂದಿರುವ ಹಾಗೂ ಭೂಮಿಗಿಂತ 27 ಪಟ್ಟು ದ್ರವ್ಯರಾಶಿ ಹೊಂದಿರುವ ಉಪ-ಶನಿಗ್ರಹ ಅಥವಾ ಸೂಪರ್ ನೆಪ್ಚೂನ್ ಗಾತ್ರದ ಸೌರವ್ಯೂಹಕ್ಕಿಂತ ಹೊರಗಿರುವ ಗ್ರಹವನ್ನು ಅಹ್ಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿಗಳ ತಂಡ ಕಂಡು ಹಿಡಿದಿದೆ.

 ಈ ಗ್ರಹ ಭೂಮಿಯಿಂದ 600 ಜ್ಯೋತಿರ್ವರ್ಷ ದೂರದಲ್ಲಿರುವ ಸೂರ್ಯನಂತಹ ನಕ್ಷತ್ರದ ಸುತ್ತ ತಿರುಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅತಿಥೇಯ ನಕ್ಷತ್ರವನ್ನು ಎಪಿಕ್211945201 ಅಥವಾ -336 ಹಾಗೂ ಗ್ರಹವನ್ನು ಎಪಿಕ್ 211945201b  K2ಅಥವಾ -336b

 ಎಂದು ಕರೆಯಲಾಗಿದೆ. ಈ ಗ್ರಹ ಸುಮಾರು 19.5 ದಿನಗಳು ನಕ್ಷತ್ರಕ್ಕೆ ಸುತ್ತು ಬರುತ್ತದೆ. ಅತಿಥೇಯ ನಕ್ಷತ್ರದಿಂತ ತುಂಬಾ ಹತ್ತಿರದಲ್ಲಿರುವುದರಿಂದ ಈ ಗ್ರಹದ ಮೇಲ್ಮೈಯ ಉಷ್ಣಾಂಶ 600 ಡಿಗ್ರಿ ಸೆಲ್ಸಿಯಸ್ ಇದೆ. ಭೂಮಿ ಹಾಗೂ ಸೂರ್ಯನ ಅಂತರವನ್ನು ಹೋಲಿಸಿದರೆ ಈ ಗ್ರಹ ನಕ್ಷತ್ರಕ್ಕಿಂತ 7 ಪಟ್ಟು ಸಮೀಪದಲ್ಲಿದೆ . ಇದು ಈ ಗ್ರಹವನ್ನು ವಾಸ ಯೋಗ್ಯವಲ್ಲದೇ ಮಾಡಿಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News