×
Ad

ಗಾಝಾ ಪಟ್ಟಿಯಲ್ಲಿ ಫೆಲೆಸ್ತೀನೀಯರ ಮೇಲೆ ಇಸ್ರೇಲ್ ದಾಳಿ: ಕನಿಷ್ಠ 100 ಮಂದಿಗೆ ಗಾಯ

Update: 2018-06-08 23:16 IST

ಗಾಝಾ (ಫೆಲೆಸ್ತೀನ್), ಜೂ. 8: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಗಡಿ ಸಮೀಪ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನೀಯರ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ಗೋಲಿಬಾರಿನಲ್ಲಿ ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ.

ಸಾವಿರಾರು ಫೆಲೆಸ್ತೀನೀಯರನ್ನು ಚದುರಿಸಲು ತಾನು ಕ್ರಮ ತೆಗೆದುಕೊಂಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

ಇಸ್ರೇಲ್‌ನಲ್ಲಿರುವ ತಮ್ಮ ಪೂರ್ವಜರ ಮನೆಗಳಿಗೆ ಹಿಂದಿರುಗಲು ಫೆಲೆಸ್ತೀನೀಯರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮಾರ್ಚ್ 30ರಿಂದ ಗಾಝಾ-ಇಸ್ರೇಲ್ ಗಡಿಯಲ್ಲಿ ಪ್ರತಿ ಶುಕ್ರವಾರ ಫೆಲೆಸ್ತೀನೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸರಣಿ ಪ್ರತಿಭಟನೆಗಳ ವೇಳೆ, ಈವರೆಗೆ ಇಸ್ರೇಲ್ ಸೈನಿಕರ ಗುಂಡಿಗೆ ಕನಿಷ್ಠ 120 ಫೆಲೆಸ್ತೀನೀಯರು ಬಲಿಯಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News