×
Ad

ಅಫ್ಘಾನ್: ಭದ್ರತಾ ಪಡೆಗಳಿಂದ 10 ತಾಲಿಬಾನಿಗಳ ಹತ್ಯೆ

Update: 2018-06-08 23:24 IST
ಸಾಂದರ್ಬಿಕ ಚಿತ್ರ

ಕಾಬೂಲ್, ಜೂ. 8: ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷ ಅಶ್ರಫ್ ಘನಿ ಘೋಷಿಸಿದ ಯುದ್ಧವಿರಾಮ ಜಾರಿಗೆ ಬರುತ್ತಿದ್ದಂತೆಯೇ, ಭದ್ರತಾ ಪಡೆಗಳು 10 ತಾಲಿಬಾನ್ ಉಗ್ರರನ್ನು ಹತ್ಯೆಗೈದಿವೆ.

ತಮ್ಮ ಮೇಲೆ ದಾಳಿ ನಡೆದರೆ ಅದಕ್ಕೆ ಪ್ರತಿಕ್ರಿಯಿಸುವುದಾಗಿ ಭದ್ರತಾ ಪಡೆಗಳು ಹೇಳಿವೆ.

ಮೃತ 10 ಮಂದಿಯ ಪೈಕಿ ಐವರು ನಂಗರ್‌ಹಾರ್ ಪ್ರಾಂತದಲ್ಲಿ ಕೊಲ್ಲಲ್ಪಟ್ಟ ಐವರು ಪಾಕಿಸ್ತಾನೀಯರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘‘ಈಗ ನಾವು ಕಾರ್ಯಾಚರಣೆಯನ್ನು ಮುಗಿಸಿದ್ದೇವೆ ಹಾಗೂ ಇನ್ನು ಯುದ್ಧವಿರಾಮವನ್ನು ಪಾಲಿಸುತ್ತೇವೆ’’ ಎಂದು ಅವರು ಹೇಳಿದರು.

ಯುದ್ಧವಿರಾಮ ಕೊಡುಗೆಗೆ ತಾಲಿಬಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಂಗರ್‌ಹಾರ್ ಪ್ರಾಂತದಲ್ಲಿ ಸಂಸದರೊಬ್ಬರ ಮನೆ ಮೇಲೆ ಅಜ್ಞಾತ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News