×
Ad

ಕುಗೋ 80ರ ಸಂಭ್ರಮ: ‘ಕಾಲಕ್ಷೇಪ’ ಹಾಸ್ಯ ಕೃತಿಯ ಬಿಡುಗಡೆ

Update: 2018-06-09 20:54 IST

ಉಡುಪಿ, ಜೂ.9: ಬೆಂಗಳೂರಿನ ಹಾಸ್ಯ ತರಂಗ ಕಲಾ ಸಂಸ್ಥೆ ಹಾಗೂ ಪದ್ಮಾಲಯ ಪ್ರಕಾಶನದ ವತಿಯಿಂದ ಹಾಸ್ಯ ಸಾಹಿತಿ ಎಚ್.ಗೋಪಾಲ ಭಟ್ (ಕು.ಗೋ) ಅವರಿಗೆ 80ರ ಸಂಭ್ರಮ ಮತ್ತು ಹಾಸ್ಯ ಸಾಹಿತಿ ಶ್ರೀನಿವಾಸ ಕುಂಡಂತಾಯ ಅವರ ‘ಕಾಲಕ್ಷೇಪ’ ಹಾಸ್ಯ ಸಂಕಲನ ಕೃತಿಯ ಬಿಡುಗಡೆ ಸಮಾ ರಂಭವನ್ನು ಶನಿವಾರ ಉಡುಪಿಯ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕು.ಗೋ., ಜೀವನ ಅನುಭವದಿಂದ ವಿವೇಕ ಹೆಚ್ಚುತ್ತದೆ. ಪರಸ್ಪರ ಒಬ್ಬರೊಬ್ಬರನ್ನು ಅರಿತುಕೊಂಡು ಪ್ರೀತಿಸುವ ಸಮಾಜ ಎಲ್ಲ ಕಡೆ ನಿರ್ಮಾಣ ಆಗಬೇಕು ಎಂದು ಅಭಿಪ್ರಾಯ ಪಟ್ಟರು. ಲೇಖಕಿ ಸರೋಜ ಆರ್.ಆಚಾರ್ಯ ಕೃತಿ ಪರಿಚಯ ಮಾಡಿದರು. ಸಾಹಿತಿ ಶ್ರೀನಿವಾಸ ಕುಂಡಂತಾಯ ಮಾತನಾಡಿದರು. ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ವಹಿಸಿದ್ದರು.

ಹಸ್ಯಾ ದರ್ಶನ ಪತ್ರಿಕೆಯ ಸಂಪಾದಕ ಎಸ್.ಎಸ್.ಪಡಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಹಾಸಂ ಸಹಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News