ಶಿರ್ವ: ಸೌಹಾರ್ದ ಇಫ್ತಾರ್ ಕೂಟ
Update: 2018-06-09 21:01 IST
ಶಿರ್ವ, ಜೂ.9: ಶಿರ್ವ ರೋಟರಿ ಕ್ಲಬ್ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವನ್ನು ಶುಕ್ರವಾರ ಶಿರ್ವ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬ್ ಸಿರಾಜುದ್ದೀನ್ ಝೈನಿ ರಮ್ಜಾನ್ ತಿಂಗಳ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾಗಿ ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್ ಶುಭ ಕೋರಿದರು. ರೋಟರಿ ಅಧ್ಯಕ್ಷ ಹಸನಬ್ಬ ಶೇಖ್ ಅಧ್ಯಕ್ಷತೆ ವಹಿಸಿದ್ದರು.
ನಿಯೋಜಿತ ರೋಟರಿ ಅಧ್ಯಕ್ಷ ದಯಾನಂದ ಶೆಟ್ಟಿ ದೆಂದೂರು, ಕಾರ್ಯ ದರ್ಶಿ ಹೊನ್ನಯ್ಯ ಶೆಟ್ಟಿಗಾರ್, ರಹ್ಮತುಲ್ಲಾ ಅಬ್ದುಲ್ ಖಾದರ್, ಉಮರ್ ಇಸ್ಮಾಯಿಲ್, ಪಾದೂರು ರೋಟರಿ ಸಮುದಾಯ ದಳದ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್, ಪಿ.ಎಂ.ಇಬ್ರಾಹಿಂ, ಅರ್ಪಾಝ್ ಎಚ್.ಎಸ್., ಶಾಹಿಲ್ ಉಮರ್ ಇಸ್ಮಾಯಿಲ್ ಉಪಸ್ಥಿತರಿದ್ದರು.
ಸುನೀಲ್ ಕಬ್ರಾಲ್ ಪರಿಚಯಿಸಿದರು. ರೋಟರಿ ಕಾರ್ಯದರ್ಶಿ ವಿಷ್ಣು ಮೂರ್ತಿ ಸರಳಾಯ ವಂದಿಸಿದರು.