×
Ad

ಭಾರತೀಯ ಕೋಸ್ಟ್ ಗಾರ್ಡ್‌ನಿಂದ 10 ಮೀನುಗಾರರ ರಕ್ಷಣೆ

Update: 2018-06-09 21:06 IST

ಮಂಗಳೂರು, ಜೂ.9: ನವ ಮಂಗಳೂರು ಬಂದರು ಬಳಿ ಸಮುದ್ರದ ನಡುವೆ ಸಿಲುಕಿ ಹಾಕಿಕೊಂಡಿದ್ದ ತಮಿಳುನಾಡಿನ ಬೋಟೊಂದರಲ್ಲಿದ್ದ 10 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್‌ಗಾರ್ಡ್ ತಂಡ ರಕ್ಷಿಸಿದೆ.

ತಮಿಳುನಾಡಿನ ಮೀನುಗಾರಿಕಾ ಬೋಟ್ ಸೈಂಟ್ ಜೋಸೆಫ್ ಜೂ. 8ರಂದು ಪ್ರಕ್ಷಬ್ಧಗೊಂಡಿರುವ ಸಮುದ್ರದ ನೀರಿನಲ್ಲಿ ಇಂಜಿನ್ ಕೆಟ್ಟು ಅಪಾಯಕ್ಕೆ ಸಿಲುಕಿತ್ತು. ಈ ಬಗ್ಗೆ ಕೋಸ್ಟ್‌ಗಾರ್ಡ್‌ಗೆ ಸೂಚನೆ ದೊರಕಿದ್ದು, ಭಾರತೀಯ ಕೋರ್ಸ್ಟ್‌ಗಾರ್ಡ್‌ನ ಅಮಾರ್ತ್ಯ ಹಡಗಿನ ಮೂಲಕ ತಕ್ಷಣ ರಕ್ಷಣೆ ಧಾವಿಸಲಾಯಿತು.

ಕೋಸ್ಟ್‌ಗಾರ್ಡ್‌ನ ಸಿಬ್ಬಂದಿ ಅಪಾಯಕ್ಕೆ ಸಿಲುಕ್ಕಿದ್ದ ಮೀನುಗಾರಿಕಾ ಬೋಟ್‌ನಲ್ಲಿದ್ದ 10 ಮಂದಿ ಮೀನುಗಾರರನ್ನು ರಕ್ಷಿಸಿ ನವ ಮಂಗಳೂರು ಬಂದರಿಗೆ ಸುರಕ್ಷಿತವಾಗಿ ತಲುಪಿಸಿದರು.

ಭಾರೀ ಬಿರುಗಾಳಿ, ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಇಂತಹ ಪರಿಸ್ಥಿತಿಯಲ್ಲಿಯೂ ಅಪಾಯಕ್ಕೆ ಸಿಲುಕಿದ್ದ ಮೀನುಗಾರನ್ನು ಸುರಕ್ಷಿತವಾಗಿ ಭಾರತೀಯ ಕೋರ್ಸ್ಟ್ ಗಾರ್ಡ್‌ನ ಅರ್ಮಾತ್ಯ ಹಡಗಿನ ಮೂಲಕ ದಡ ಸೇರಿಸಲಾಗಿದೆ ಎಂದು ಕೋರ್ಸ್ಟ್ ಗಾರ್ಡ್‌ನ ಜಿಲ್ಲಾ ಕಮಾಂಡರ್ (ಕರ್ನಾಟ) ಡಿಐಜಿ ಎಸ್.ಎಸ್. ದಾಸಿಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News