ಕಾರ್ಕಳ: ಜೂ.10ರಂದು ಅಂತರ್ ಜಿಲ್ಲಾ ಚೆಸ್
Update: 2018-06-09 21:20 IST
ಉಡುಪಿ, ಜೂ.9: ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಮತ್ತು ರೋಟರಿ ಕ್ಲಬ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಾಳೆ ಜೂ.10ರಂದು ಬೆಳಗ್ಗೆ 8:30ರಿಂದ 11ನೇ ಅಂತರ್ ಜಿಲ್ಲಾ ಮುಕ್ತ ಕ್ಷಿಪ್ರ ನಡೆಯ ಚದುರಂಗ ಪಂದ್ಯಕೂಟವನ್ನು ಆಯೋಜಿಸಲಾಗಿದೆ.
ಕಾರ್ಕಳದ ಹೋಟೆಲ್ ಆಶ್ರಯದಲ್ಲಿ ನಡೆಯುವ ಚೆಸ್ ಕೂಟದಲ್ಲಿ 8,10, 12, 14 ಮತ್ತು 16ವಯೋಮಿತಿಯಲ್ಲಿ ಹಾಗೂ ಮುಕ್ತ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಪಂದ್ಯಕೂಟದಲ್ಲಿ 30 ಸಾವಿರ ರೂ. ಮೌಲ್ಯದ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ರಾಜ್‌ಗೋಪಾಲ್ ಶೆಣೈ ಹಾಗೂ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಡಾ ಎಸ್ ಕೆ ಮಹದೇವ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.