ಹೆರಿಗೆ ಸಮಯದಲ್ಲಿ ಸಂಭವಿಸುವ ಸಾವಿನಲ್ಲಿ ಗಣನೀಯ ಇಳಿಕೆ: ಭಾರತವನ್ನು ಶ್ಲಾಘಿಸಿದ ಯುನಿಸೆಫ್

Update: 2018-06-09 16:14 GMT

ಹೊಸದಿಲ್ಲಿ, ಜೂನ್9: ಭಾರತದಲ್ಲಿ ಹೆರಿಗೆ ಸಮಯದಲ್ಲಿ ಸಂಭವಿಸುವ ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಯುನಿಸೆಫ್‌ನ ಭಾರತೀಯ ಪ್ರತಿನಿಧಿ ಯಾಸ್ಮಿನ್ ಅಲಿ ಹಕ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಾದರಿ ನೋಂದಣಿ ವ್ಯವಸ್ಥೆ ಈ ವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2013ರಿಂದೀಚೆಗೆ ಇಂಥ ಸಾವಿನಲ್ಲಿ ದಾಖಲೆಯ ಶೇ.22 ಇಳಿಕೆಯಾಗಿದೆ.

2011-2013ರಲ್ಲಿ ಸಾವಿರಕ್ಕೆ 167 ಇದ್ದ ಸಾವಿನ ಸಂಖ್ಯೆ 2014-2016ರ ವೇಳೆಗೆ 130ಕ್ಕೆ ತಲುಪಿದೆ. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಉಂಟಾಗಿರುವ ಬದಲಾವಣೆಯನ್ನು ಹೊಗಳಿರುವ ಯಾಸ್ಮಿನ್, ಉತ್ತರ ಪ್ರದೇಶದಲ್ಲಿ ಅತೀಹೆಚ್ಚು ಹೆರಿಗೆಗಳು ಮನೆಯಲ್ಲೇ ನಡೆಯುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ರಾಜ್ಯದಲ್ಲಿ ಹೆರಿಗೆ ಸಮಯದ ಸಾವಿನಲ್ಲಿ ಶೇ.30 ಇಳಿಕೆಯಾಗಿದೆ. ಇದು ರಾಷ್ಟ್ರೀಯ ಸರಾಸರಿಯ ಶೇ.22ಗಿಂತ ಬಹಳ ಅಧಿಕವಾಗಿದೆ ಎಂದು ತಿಳಿಸಿದ್ದಾರೆ. ಹೆರಿಗೆಯ ಸಮಯದಲ್ಲಿ ಉಂಟಾಗುವ ಒಂದು ಸಾವು ಕೂಡಾ ಹೆಚ್ಚೇ. ಹಾಗಾಗಿ ತಡೆಯಬಹುದಾದ ಈ ಅವಘಡ ನಡೆಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News