×
Ad

ಡೆಬಿಟ್ ಕಾರ್ಡ್ ಹ್ಯಾಕ್‌: ಹಣ ವರ್ಗಾವಣೆ; ದೂರು ದಾಖಲು

Update: 2018-06-09 23:20 IST

ಮಂಗಳೂರು, ಜೂ.19: ನಗರದ ಸುಧೀರ್ ಭಂಡಾರ್ಕರ್ ಬಿ. ಎಂಬವರ ಡೆಬಿಟ್ ಕಾರ್ಡ್ ಹ್ಯಾಕ್‌ಗೈದು ಹಣವನ್ನು ವರ್ಗಾವಣೆಗೊಳಿಸಿದ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಶುಕ್ರವಾರ ತಡರಾತ್ರಿ ಸುಮಾರು 2:28ರ ವೇಳೆಗೆ ಸುಧೀರ್ ಭಂಡಾರ್ಕರ್‌ಗೆ ಸೇರಿದ ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಕಾರ್ಡ್ ಹ್ಯಾಕ್‌ಗೈದು 1,958 ರೂ.ಮತ್ತು 1,45,649 ರೂ.ವನ್ನು ವರ್ಗಾವಣೆಗೊಳಿಸಿದ್ದಾರೆ ಎಂದು ದೂರು ನೀಡಲಾಗಿದೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News