ಮಂಗಳೂರು: ಬೀದಿ ಬದಿ ವ್ಯಾಪಾರಸ್ಥರಿಂದ ಇಫ್ತಾರ್ ಕೂಟ
Update: 2018-06-10 21:55 IST
ಮಂಗಳೂರು, ಜೂ. 10: ನಗರದ ಕೇಂದ್ರ ಮಾರುಕಟ್ಟೆಯ ಬೀದಿ ಬದಿ ಹಣ್ಣು ಹಂಪಲು ವ್ಯಾಪಾರಸ್ಥರಿಂದ ಕೇಂದ್ರ ಮಾರುಕಟ್ಟೆಯಲ್ಲಿ ರವಿವಾರ ಸಂಜೆ ಇಫ್ತಾರ್ ಕೂಟ ನಡೆಯಿತು.
ಇಫ್ತಾರ್ ಕೂಟದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಮಾಜಿ ಮೇಯರ್ ಅಶ್ರಫ್, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಬೆಳ್ಮ ಗ್ರಾ.ಪಂ. ಉಪಾಧ್ಯಕ್ಷ ಸತ್ತಾರ್ ಸಿ.ಎಂ., ಶಿವಣ್ಣ, ನೂರುದ್ದೀನ್ ಕುದ್ರೋಳಿ, ಮುಹಮ್ಮದ್ ಹಾರಿಸ್ ದೇರಳಕಟ್ಟೆ, ಫಝಲ್ ಕುದ್ರೋಳಿ, ಇಸ್ಮಾಯೀಲ್ ಕಣ್ಣೂರು, ಜಲೀಲ್ ವಳಚ್ಚಿಲ್, ಫಾರೂಕ್ ಬೆಳ್ಮಕಲ್ಲಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.