ಉಡುಪಿಯ ಪ್ರೆಸ್ಟೀಜ್ ಎಕ್ಸಕ್ಲ್ಯೂಸಿವ್‌ನಲ್ಲಿ ರಮಝಾನ್ ವಿಶೇಷ ಮಾರಾಟ
ಉಡುಪಿ, ಜೂ.11: ಉಡುಪಿ ಬನ್ನಂಜೆ ರಸ್ತೆಯಲ್ಲಿ ಗ್ಯಾಲರಿಯ ಫರ್ನಿಚರ್ ಎದುರಿನ ಪ್ರೆಸ್ಟೀಜ್ ಉತ್ಪನ್ನಗಳ ಮಾರಾಟ ಮಳಿಗೆ ಪ್ರೆಸ್ಟೀಜ್ ಎಕ್ಸಕ್ಲ್ಯೂಸಿವ್‌ನಲ್ಲಿ ರಮಝಾನ್ ಪ್ರಯುಕ್ತ ಅಡುಗೆ ಉಪಕರಣಗಳ ಭಾರೀ ವಿಶೇಷ ದರ ಕಡಿತ ಮಾರಾಟವನ್ನು ಹಮ್ಮಿ ಕೊಳ್ಳಲಾಗಿದೆ.
ಒಮೇಗಾ ಡೀಲಕ್ ಮೆಟಾಲಿಕಾ ನಾನ್ ಸ್ಟಿಕ್ ಪಾತ್ರೆಗಳಿಗೆ ಶೇ.47, ಬಿರಿ ಯಾನಿ ಪಾತ್ರೆಗಳಿಗೆ ಶೇ.20, ಗ್ರಿಲ್ ತವಾಗಳಿಗೆ ಶೇ.20, ಹೊಸ ಎಡ್ಜ್ ಗ್ಯಾಸ್ ಸ್ಟವ್ ಮೇಲೆ ಶೇ.35, ಇದ್ದಿಲಿನ ಗ್ರಿಲ್ಗಳಿಗೆ ಶೇ.20 ಹಾಗೂ 16 ಮತ್ತು 20 ಲೀಟರ್ ಕುಕ್ಕರ್‌ಗಳಿಗೆ ಶೇ.15ರ ನೇರ ರಿಯಾಯತಿಯನ್ನು ಪಡೆಯಬಹುದು.
ಇದೇ ಸಂದರ್ಭದಲ್ಲಿ ವಿನಿಮಯ ಮೇಳ ಎನಿಥಿಂಗ್ ಫಾರ್ ಎನಿಥಿಂಗ್ ನಡೆಯುತ್ತಿದ್ದು ಇದು ಬೇಡದ್ದನ್ನು ಕೊಟ್ಟು ಬೇಕಾದ್ದನ್ನು ಪಡೆಯುವ ಉತ್ತಮ ಅವಕಾಶ. ಬದಲಾವಣೆಗಳಿಗೆ ಶೇ.50ರ ತನಕ ರಿಯಾಯತಿ ಪಡೆಯಬಹುದು. ಗ್ರಾಹಕರು ಯಾವುದೇ ಕಂಪನಿಯ ಹಳೆಯ ಕೆಲಸ ಮಾಡುವ ಅಥವಾ ಕೆಟ್ಟು ಹೋದ ಅಡುಗೆ ಉಪಕರಣಗಳಾದ ಕುಕ್ಕರ್, ಕುಕ್‌ವೇರ್, ಗ್ಯಾಸ್‌ಸ್ಟವ್, ಮಿಕ್ಸರ್ ಗ್ರೈಂಡರ್, ವೆಟ್ ಗ್ರೈಂಡರ್, ಇಂಡಕ್ಶನ್ ಕುಕ್‌ಟಾಪ್, ಚಿಮಿಣಿ, ಹಾಬ್, ಓಟಿಜಿ, ಇಸ್ತ್ರಿ ಪೆಟ್ಟಿಗೆ, ರೋಟಿ ಮೇಕರ್ ಇನ್ನಿತರ ಅಡುಗೆಗೆ ಸಂಬಂಧ ಪಟ್ಟ ಉಪಕರಣಗಳನ್ನು ಕೊಟ್ಟು ಬದಲಿಗೆ ಯಾವುದೇ ಹೊಸ ಉಪಕರಣಗಳನ್ನು ಪಡೆಯಬಹುದು.
ಕುಕ್ಕರ್ ಮೇಲೆ ಶೇ.35ರ ತನಕ, ಕುಕ್‌ವೇರ್ ಮೇಲೆ ಶೇ.45ರ ತನಕ, ಮಿಕ್ಸರ್ ಗ್ರೈಂಡರ್ ಮೇಲೆ ಶೇ.35ರ ತನಕ, ಗಾಸ್ ಸ್ಟವ್ ಮೇಲೆ ಶೇ.38ರ ತನಕ, ರೈಸ್ ಕುಕ್ಕರ್ ಮೇಲೆ ಶೇ.40ರ ತನಕ, ಕಿಚನ್ ಹುಡ್ ಮೇಲೆ ಶೇ.52ರ ತನಕ, ವಾಟರ್ ಪ್ಯೂರಿಫೈರ್ ಮೇಲೆ ಶೇ.38ರ ತನಕ, ಮ್ಯಾಜಿಕ್ ಮಾಪ್‌ಗಳ ಮೇಲೆ ಶೇ.45ರ ತನಕ ವಿನಿಮಯ ಕೊಡುಗೆ ಇರುತ್ತವೆ. ಸಣ್ಣ ಉಪಕರಣ ಗಳಾದ ಇಂಡಕ್ಷನ್, ಇಸ್ತ್ರಿ ಪೆಟ್ಟಿಗೆ, ಓಟಿಜಿ, ವ್ಯಾಕ್ಯುಮ್ ಫ್ಲಾಸ್ಕ್, ಕೆಟಲ್, ಟೋಸ್ಟರ್, ಸ್ಯಾಂಡ್‌ವಿಚ್ ಮೇಕರ್, ರೋಟಿ ಮೇಕರ್, ಬ್ಲೆಂಡರ್‌ಗಳಿಗೆ ಶೇ. 50 ರವರೆಗೆ ವಿನಿಮಯ ರಿಯಾಯತಿ ಇರುತ್ತದೆ.
ಪ್ರೆಸ್ಟೀಜ್ನ ಹೊಸ ಉಪಕರಣಗಳು: ಪ್ರೆಸ್ಟೀಜ್ ಎಡ್ಜ್‌ಗ್ಯಾಸ್ ಸ್ಟವ್, ಆಟೋಮ್ಯಾಟಿಕ್ ಮಿಲ್ಕ್ ಬಾಯ್ಲರ್, ತಾಮ್ರ ಮತ್ತು ಹಿತ್ತಾಳೆಯ ವಾಟರ್ ಪ್ಯೂರಿಫೈರ್, ಓಝೋನೈಜರ್, ಪಾಪ್‌ಕಾರ್ನ್ ಮೇಕರ್ ಮತ್ತು ಪಿಜ್ಜಾ ಮೇಕರ್ ಲಭ್ಯ ಇವೆ ಎಂದು ಪ್ರಕಟಣೆ ತಿಳಿಸಿದೆ.