×
Ad

ಕಟಪಾಡಿ: ಮಳೆ ನೀರಿನೊಂದಿಗೆ ಅನುಸಂಧಾನ

Update: 2018-06-11 20:31 IST

ಕಾಪು, ಜೂ.11: ಕಟಪಾಡಿ ಸಂತ ವಿನ್ಸೆಂಟ್ ಡಿಪಾವ್ಲ್ ಚರ್ಚ್ ಸಾಮಾಜಿಕ ಅಭಿವೃದ್ಧಿ ಆಯೋಗ ಮತ್ತು ಕೆಥೊಲಿಕ್ ಸಭಾದ ಆಶ್ರಯದಲ್ಲಿ ಮಳೆ ನೀರಿನೊಂದಿಗೆ ಅನುಸಂಧಾನ ಕಾರ್ಯಕ್ರಮವು ಚರ್ಚಿನ ಸಭಾಂಗಣದಲ್ಲಿ ರವಿವಾರ ಜರಗಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಜೋಸೆಫ್ ರೆಬೆಲ್ಲೊ ಕಲ್ಯಾಣಪುರ, ಮನುಷ್ಯ, ನೀರು ಮತ್ತು ಪ್ರಕೃತಿಯ ನಡುವೆ ಇರುವ ಸಂಬಂಧ, ಪ್ರಜ್ಞಾವಂತರು ಎಂದು ಹಣೆಪಟ್ಟಿ ಕಟ್ಟಿಕೊಂಡ ಮಾನವ ನೀರನ್ನು ಪೋಲು ಮಾಡುವ ರೀತಿ, ಅದ ರೊಂದಿಗೆ ಪ್ರಕೃತಿಯ ನಾಶ, ಮುಂದಿನ ಜನಾಂಗಕ್ಕೆ ನೀರಿನ ಸದ್ಬಳಕೆ ಯಾವ ರೀತಿಯಲ್ಲಿ ಮಾಡಬೆೀಕು ಎಂಬ ಕುರಿತು ಮಾಹಿತಿ ನೀಡಿದರು.

ಕೆಥೊಲಿಕ್ ಸಭಾ ಅಧ್ಯಕ್ಷ ಬ್ರಾಯನ್ ಕೊರೆಯಾ ಸ್ವಾಗತಿಸಿದರು. ಚರ್ಚಿನ ಧರ್ಮಗುರು ವಂ.ರೋನ್ಸನ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News