ಉಡುಪಿ: ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಜೂ. 13ರಂದು ಮಾರ್ಗದರ್ಶನ ಶಿಬಿರ
ಉಡುಪಿ, ಜೂ.11: ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಉಡುಪಿ ಬನ್ನಂಜೆಯ ಬಿಲ್ಲವರ ಸೇವಾ ಸಂಘಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ ಸಂಸ್ಥೆ ನಡೆಸಿ ಕೊಡುವ ಸಿಇಟಿ ಮತ್ತು ನೀಟ್ ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಜೂ.13ರ ಬುಧವಾರ ಬೆಳಗ್ಗೆ 10 ಕ್ಕೆ ಬನ್ನಂಜೆಯ ಬಿಲ್ಲವರ ಸೇವಾ ಸಂಘದ ಶಿವಗಿರಿ ಸಭಾಂಗಣದಲ್ಲಿ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಕಾಯರ್ಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ ನ್ಯಾಚುರೋರಪಥಿ, ಬಿ. ಫಾರ್ಮ್, ಫಾರ್ಮ ಡಿ., ಇಂಜಿನಿಯರಿಂಗ್ ಮತ್ತು ಫಾರ್ಮ್ ಸಾಯನ್ಸ್‌ನ ವಿವಿಧ ಕೋರ್ಸುಗಳಿಗೆ ನಡೆಯಲಿರುವ ಆನ್‌ಲೈನ್ ಸಿಇಟಿ/ನೀಟ್ ಕೌನ್ಸಿಲಿಂಗ್‌ನ ವಿಧಾನ, ದಾಖಲಾತಿ ಪರಿಶೀಲನೆ, ಬೇಕಾಗಿರುವ ಅಗತ್ಯ ದಾಖಲೆಗಳು, ಸೀಟುಗಳ ಆಯ್ಕೆ ಪ್ರಕ್ರಿಯೆ ಮತ್ತು ಇತರ ಪೂರ ಮಾಹಿತಿಗಳನ್ನು ನೀಡಲಾಗುವುದು.
ಈ ಕಾರ್ಯಕ್ರಮ ಈಗಾಗಲೇ ಮಂಗಳೂರಿನಲ್ಲಿ ನಡೆದಿದ್ದು, ಉಡುಪಿ ಸುತ್ತ ಮುತ್ತಲ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗಾಗಿ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ. ಇದು ಉಚಿತವಾಗಿದ್ದು, ಆಸಕ್ತ ವಿದ್ಯಾರ್ಥಿ- ಹೆತ್ತವರೆಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಧವ ಬನ್ನಂಜೆ ವಿನಂತಿಸಿದ್ದಾರೆ. ವಿವರಗಳಿಗೆ ಮೊಬೈಲ್: 9845054191/9448252703ಗೆ ಕೆ ಮಾಡುವಂತೆ ಮನವಿ ಮಾಡಿದ್ದಾರೆ.