×
Ad

ಉಡುಪಿ: ರಂಗಶಿಕ್ಷಣದಲ್ಲಿ ಡಿಪ್ಲೋಮ ಕೋರ್ಸ್‌ಗೆ ಅರ್ಜಿ ಆಹ್ವಾನ

Update: 2018-06-11 22:17 IST

ಉಡುಪಿ, ಜೂ.11: ಕರ್ನಾಟಕ ಸರಕಾರದ ರಂಗಾಯಣ, ಭಾರತೀಯ ರಂಗಶಿಕ್ಷಣ ಕೇಂದ್ರ ‘ರಂಗಶಾಲೆ’ಯನ್ನು ಕಳೆದ 8 ವರ್ಷಗಳಿಂದ ನಡೆಸುತ್ತಿದ್ದು, ಈ ಕೋರ್ಸಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಾನ್ಯತೆಯನ್ನು ನೀಡಿದೆ. ಈ ಸಾಲಿನ (2018-19) ಒಂದು ವರ್ಷದ ರಂಗಶಿಕ್ಷಣದಲ್ಲಿ ಡಿಪ್ಲೋಮ ಕೋರ್ಸಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳ ಕನಿಷ್ಠ ವಿದ್ಯಾರ್ಹತೆ ದ್ವಿತೀಯ ಪಿಯುಸಿ ಆಗಿದ್ದು, 18ರಿಂದ 28ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ತಿಂಗಳಿಗೆ 3,000 ರೂ. ವಿದ್ಯಾರ್ಥಿವೇತನ ಹಾಗೂ ಊಟೋಪಚಾರಕ್ಕಾಗಿ ತಿಂಗಳಿಗೆ 1,800 ರೂ. ಗಳನ್ನು ನೀಡಲಾಗುವುದು.

ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಾಯಣದ ವೆಬ್‌ಸೈಟ್ -www.rangayana.org ಸಂದರ್ಶನವನ್ನು ಜೂ.25 ಹಾಗೂ 26ರಂದು ರಂಗಾಯಣದ ಆವರಣದಲ್ಲಿ ನಡೆಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳು ಜುಲೈ 8ರೊಳಗೆ ಶಾಲೆಗೆ ಪ್ರವೇಶವನ್ನು ಪಡೆದುಕೊಳ್ಳಬೇಕು.

ಜು.15ರಿಂದ ತರಗತಿಗಳು ಪ್ರಾರಂಭ ಗೊಳ್ಳುತ್ತವೆ. ಹೆಚ್ಚಿನ ವಿವರಗಳಿಗೆ ಭಾರತೀಯ ರಂಗಶಿಕ್ಷಣ ಕೇಂದ್ರದ ಸಂಯೋಜಕ ಎಸ್.ರಾಮನಾಥ (0821-2512639/9448938661) ರನ್ನು ಸಂಪರ್ಕಿಸುವಂತೆ ರಂಗಾಯಣ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News