ಹಾಲಾಡಿ: ಗ್ರಂಥಾಲಯಕ್ಕೆ ಅರ್ಜಿ ಆಹ್ವಾನ
Update: 2018-06-11 22:31 IST
ಕುಂದಾಪುರ, ಜೂ.11: ತಾಲೂಕಿನ ಹಾಲಾಡಿ ಗ್ರಾಪಂ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕರ ಸ್ಥಾನವನ್ನು ಗೌರವ ಸಂಬಾವನೆ ಆಧಾರದ ಮೇಲೆ ನೇಮಕಾತಿ ಮಾಡಲು 3ಬಿ ಗುಂಪಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸೆಸೆಲ್ಸಿ ಉತ್ತೀರ್ಣರಾಗಿದ್ದು, ಅದೇ ಗ್ರಾಪಂ ವ್ಯಾಪ್ತಿಯಲ್ಲಿ ವಾಸವಾಗಿರಬೇಕು. ಅರ್ಜಿ ಹಾಗೂ ದೃಢಿಕೃತ ದಾಖಲೆಗಳನ್ನು ಗ್ರಾಪಂಗೆ ಸಲ್ಲಿಸಲು ಕೊನೆಯ ದಿನ ಜು.6. ಹೆಚ್ಚಿನ ಮಾಹಿತಿಗಾಗಿ ಹಾಲಾಡಿ ಗ್ರಾಪಂ/ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ (ದೂರವಾಣಿ: 0820- 2523438) ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.