×
Ad

ಮಂಗಳೂರು: ಸಿಎಫ್ಎಲ್ ಬಲ್ಬ್ ಕಳವು

Update: 2018-06-11 23:04 IST

ಮಂಗಳೂರು, ಜೂ. 11: ನಗರದ ನಾಗುರಿಯಲ್ಲಿನ ಹೋಟೆಲೊಂದರಿಂದ ಸಿಎಫ್ಎಲ್ ಬಲ್ಬ್‌ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ನಾಗುರಿಯಲ್ಲಿರುವ ತನುಶ್ರೀ ಹೊಟೇಲ್ ಆವರಣಕ್ಕೆ ಬಂದಿರುವ ಕಳ್ಳರು ಹೊರಾಂಗಣದಲ್ಲಿ ಹಾಕಲಾಗಿದ್ದ ಎರಡು ಸಿಎಫ್ಎಲ್ ಬಲ್ಬ್‌ಗಳನ್ನು ಕಳವು ಮಾಡಿದ್ದಾರೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ಚೂರಿ ಹಿಡಿದುಕೊಂಡು ಆಗಮಿಸಿದ್ದು ಹೊಟೇಲ್ ವರಾಂಡದಲ್ಲಿ ಅತ್ತಿಂದಿತ್ತ ಓಡಾಡಿದ್ದಾರೆ. ಬಳಿಕ ಸಿಎಫ್ಎಲ್ ಬಲ್ಬ್‌ಗಳನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News