×
Ad

ಉಡುಪಿ: ಜಿಲ್ಲೆಯಾದ್ಯಂತ ಗಾಳಿ-ಮಳೆಗೆ ಲಕ್ಷಾಂತರ ರೂ. ಹಾನಿ

Update: 2018-06-11 23:14 IST

ಉಡುಪಿ, ಜೂ.11: ಹವಾಮಾನ ಇಲಾಖೆ ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದರೂ, ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆದರೂ ಜಿಲ್ಲೆಯಾದ್ಯಂತ ಗಾಳಿ-ಮಳೆಗೆ ಸಿಲುಕಿ ಮನೆ ಹಾಗೂ ಇತರ ಸೊತ್ತುಗಳಿಗೆ ಆಗುವ ಹಾನಿಯ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ.

ನಿನ್ನೆ ಬೆಳಗಿನಿಂದ ಇಂದು ಅಪರಾಹ್ನದವರೆಗೆ ಗಾಳಿ-ಮಳೆಯಿಂದ ಜಿಲ್ಲೆಯಾದ್ಯಂತ ಹಾನಿಯ 20ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು ಐದು ಲಕ್ಷರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವ ಬಗ್ಗೆ ಅಂದಾಜು ಮಾಡಲಾಗಿದೆ.

ಬೈಂದೂರಿನ ಮರವಂತೆಯಲ್ಲಿ ಇಂದು ಸಂಜೆ ವೇಳೆ ರಾಧಾ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಕುಸಿದಿದ್ದು, 40,000ರೂ. ನಷ್ಟದ ಅಂದಾಜು ಮಾಡಲಾಗಿದೆ. ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆಯ ಸುಮತಿ ಕೊರಗ ಎಂಬವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.

ಕುಂದಾಪುರ ತಾಲೂಕಿನ ಹಳ್ನಾಡು ಗ್ರಾಮದ ಮನೆ ಮೇಲೆ ಮರಬಿದ್ದು 25,000ರೂ., ಹಕ್ಲಾಡಿ ಗ್ರಾಮದ ಕೊರಗಮ್ಮ ಶೆಡ್ತಿಯವರ ಮನೆಗೆ ಸಿಡಿಲು ಬಡಿದು 10,000ರೂ., ಬಸ್ರೂರು ಗ್ರಾಮದ ಶಂಕರ ಮೊಗವೀರ ಮನೆಗೆ 25,000ರೂ., ಹಾಲಾಡಿ ಗ್ರಾಮದ ಸದಾಶಿವ ಪ್ರಭು ಅವರ ಮನೆಗೆ 25,000ರೂ., ಶೇಡಿಮನೆ ಗ್ರಾಮದ ಲಕ್ಷ್ಮೀಬಾಯಿ ಮನೆಗೆ 10,000ರೂ. ನಷ್ಟ ಸಂಭವಿಸಿದೆ.

ಗುಲ್ವಾಡಿ ಗ್ರಾಮದ ಸಂಜೀವ ಶೆಟ್ಟಿಯವರ ಮನೆಗೆ ಗಾಳಿ-ಮಳೆಯಿಂದ 25,000ರೂ., ಶಂಕರನಾರಾಯಣ ಗ್ರಾಮದ ಯಶೋಧರ ಮನೆಗೆ 10,000ರೂ. ಅಂಪಾರು ಗ್ರಾಮದ ನಾಗರತ್ನ ಅವರ ಮನೆಯ ತೋಟಗಾರಿಕಾ ಬೆಳೆಗಳಿಗೆ 50,000ರೂ., ಅದೇ ಗ್ರಾಮದ ವಿಜಯಲಕ್ಷ್ಮೀ ಅವರ ಮನೆಗೆ 50,000ರೂ.,ಕುಂದಾಪುರದ ವರದ ಎಂಬವರ ಮನೆಗೆ 33,000ರೂ. ನಷ್ಟ ವಾಗಿರುವ ಬಗ್ಗೆ ಅಂದಾಜು ಮಾಡಲಾಗಿದೆ.

ಕಾಪು ತಾಲೂಕು ನಡ್ಸಾಲು ಗ್ರಾಮದ ಅಕಿಲಾ ಅವರ ಮನೆ ಮೇಲೆ ಮರ ಬಿದ್ದು 40,000ರೂ., ಕಾರ್ಕಳದ ತಾಲೂಕು ಬೋಳ ಗ್ರಾಮದ ಯಮುನಾ ಅವರ ಮನೆ ಮೇಲೆ ಇಂದು ಬೆಳಗಿನ ಜಾವ ತೆಂಗಿನ ಮರ ಬಿದ್ದು 10,000ರೂ., ಅದೇ ಗ್ರಾಮದ ಶಾರದಾ ಮೂಲ್ಯ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು 10,000ರೂ., ಮರ್ಣೆ ಗ್ರಾಮದ ಅಬ್ಬಾಸ್ ಅವರ ಮನೆಗೆ ಇಂದು ಬೆಳಗಿನ ಜಾವ ಸಿಡಿಲು ಬಡಿದು 10,000ರೂ. ನಷ್ಟ ಸಂಭವಿಸಿದೆ.

ಕಾರ್ಕಳ ತಾಲೂಕು ಕಡ್ತಲದ ಬೇಬಿ ಆಚಾರ್ತಿ ಅವರ ಮನೆಗೆ 15,000ರೂ., ಕೌಡೂರು ಗ್ರಾಮದ ಸೀತಾ ಪೂಜಾರ್ತಿ ಮನೆಗೆ 15,000ರೂ. ಅದೇ ಗ್ರಾಮದ ಸರೋಜಿನಿ ಶೆಟ್ಟಿಗಾರ್ತಿ ಮನೆಯ ಗೋಡೆ ಕುಸಿದು 20,000ರೂ., ಕುಚ್ಚೂರು ಗ್ರಾಮದ ಲಕ್ಷೀ ಪೂಜಾರ್ತಿ ತೋಟದ 60 ಬಾಳೆ ಗಿಡ, ಅಡಿಕೆ ಹಾಗೂ ತೆಂಗಿನ ಮರ ಗಾಳಿಗೆ ನೆಲಕ್ಕುರುಳಿದೆ. ಅದೇ ಗ್ರಾಮದ ಶ್ಯಾಮರಾಯ ಶೆಟ್ಟಿ ಅವರ ಅಡಿಕೆ ಹಾಗೂ ಇತರ ಮರಗಳು ಗಾಳಿಗೆ ಧರಾಶಾಹಿ ಯಾಗಿ 25,000ರೂ., ದುರ್ಗಾ ಗ್ರಾಮದ ಕೊಳಂಬೆ ಸುಶೀಲಾ ಆಚಾರ್ತಿ ಮನೆಗೆ 25,000ರೂ.ನಷ್ಟವಾಗಿರುವ ಬಗ್ಗೆ ವರದಿಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News