ಉಡುಪಿ: ಮುಖ್ಯಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಗೆ ಸಾಲ ಸೌಲಭ್ಯ

Update: 2018-06-11 17:59 GMT

ಉಡುಪಿ, ಜೂ.11: 2018-19ನೇ ಸಾಲಿನ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಸಿಎಂಇಜಿಪಿ)ಯಡಿ ಸ್ವಉದ್ಯೋಗ ಸ್ಥಾಪಿಸಲು ಆಸಕ್ತಿ ಇರುವ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿ ಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗೆ ಗರಿಷ್ಠ ಯೋಜನಾ ವೆಚ್ಚ 10 ಲಕ್ಷ ರೂ. ಬ್ಯಾಂಕ್ ಸಾಲದೊಂದಿಗೆ ಹೊಸ ಕೈಗಾರಿಕೆ, ಉತ್ಪಾದನಾ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸು ವವರಿಗೆ ಅವಕಾಶವಿದ್ದು, ಯೋಜನಾ ವೆಚ್ಚದ ಮೇಲೆ ಶೇ.25ರಿಂದ 35ರವರೆಗೆ ಸಹಾಯಧನ ನೀಡಲಾಗುವುದು.

ಅಭ್ಯರ್ಥಿ ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಅರ್ಜಿದಾರರಿಗೆ ಕನಿಷ್ಟ 21 ವರ್ಷ ತುಂಬಿದ್ದು, ಗರಿಷ್ಠ ಸಾಮಾನ್ಯ ವರ್ಗದವರಿಗೆ 35 ವರ್ಷ ಹಾಗೂ ವಿಶೇಷ ವರ್ಗ( ಮಹಿಳೆ/ಪ.ಜಾತಿ/ಪ.ಪಂಗಡ/ ಹಿಂದುಳಿದ ವರ್ಗ /ಅಲ್ಪಸಂಖ್ಯಾತರು/ಮಾಜಿ ಯೋಧರು/ಅಂಗವಿಕಲರು)ದವರಿಗೆ 45 ವರ್ಷ.

ನಿರುದ್ಯೋಗಿ ಯುವಕ /ಯುವತಿಯರು ವೆಬ್‌ಸೈಟ್- http://cmegp.kar.nic.in- ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ನೊಂದಾಯಿಸಿ ಅರ್ಜಿ ಪ್ರತಿಯನ್ನು ನಿಗದಿತ ದಾಖಲೆಗಳೊಂದಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ(ದೂರವಾಣಿ:0820-2575650/2575655), ಹಾಗೂ ಜಿಲ್ಲಾ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಉಡುಪಿ(ದೂರವಾಣಿ:0820-2574855) ಇಲ್ಲಿಗೆ ಕಳುಹಿಸಬೇಕು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂ.30ರವರೆಗೆ ಅವಕಾಶವಿದೆ. ಅರ್ಜಿಯ ಪ್ರಿಂಟ್ ಹಾಗೂ ಇತರ ದಾಖಲೆಗಳನ್ನು ಕಚೇರಿಗೆ ಅಥವಾ ಕೆವಿಐಬಿ ಗೆ ಸಲ್ಲಿಸಲು ಕೊನೆಯ ದಿನ ಜು.10. ಹೆಚ್ಚಿನ ಮಾಹಿತಿಗೆ ಜಿಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News