ಉಡುಪಿ: ಜೂ.18 ರಂದು ಅಂಚೆ ಅದಾಲತ್
Update: 2018-06-11 23:33 IST
ಉಡುಪಿ, ಜೂ.11: ಉಡುಪಿ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜೂ.18 ರಂದು ಅಪರಾಹ್ನ 3 ಕ್ಕೆ ತ್ರೈಮಾಸಿಕ ಅಂಚೆ ಅದಾಲತ್‌ನ್ನು ನಡೆಸಲಾಗುವುದು.
ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಜೂ.14ರ ಮೊದಲು ಅಧೀಕ್ಷಕರಿಗೆ ಕಳುಹಿಸಬೇಕು ಅಲ್ಲದೇ ಅಂಚೆ ಅದಾಲತ್ ನಡೆಯುವ ದಿನದಂದು ಹಾಜರಿದ್ದು, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಉಡುಪಿ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.