ಉಡುಪಿ; ಬೆಳೆ ವಿಮೆ ಯೋಜನೆ
ಉಡುಪಿ, ಜೂ.12: 2018-19ನೇ ಸಾಲಿನ ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆವಿಮಾ ಯೋಜನೆಯಡಿ ಉಡುಪಿ ಜಿಲ್ಲೆಗೆ ಒಳ ಪಡಿಸಲಾಗಿರುವ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರಿಗೆ ಐಚ್ಛಿಕವಾಗಿ ವಿಮೆಗೆ ಒಳಪಡಿಸುವ ಸಲುವಾಗಿ ಜಿಲ್ಲೆಯಲ್ಲಿ ಅಧಿಸೂಚಿಸಲ್ಪಟ್ಟ ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರಾಸರಿ ಹಣಕಾಸು ಪ್ರಮಾಣಕ್ಕೆ ಸಮನಾದ ವಿಮಾ ಮೊತ್ತವನ್ನು ನೀಡುವ ಸಲುವಾಗಿ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಅಡಿಕೆ ಬೆಳೆಗೆ 161 ವಿಮಾ ಟಕಗಳು ಹಾಗೂ ಕಾಳುಮೆಣಸಿಗೆ 139 ವಿಮಾ ಘಟಕಗಳಿರುತ್ತವೆ. ಅಡಿಕೆಗೆ 1.28 ಲಕ್ಷ ರೂ. ವಿಮಾ ಮೊತ್ತಕ್ಕೆ ಶೇ. 5ರಂತೆ ಪ್ರತೀ ಹೆಕ್ಟೇರ್‌ಗೆ 6,400ರೂ. ಹಾಗೂ ಕಾಳುಮೆಣಸಿಗೆ 0.47 ಲಕ್ಷ ವಿಮಾ ಮೊತ್ತಕ್ಕೆ ಶೇ.5ರಂತೆ ಪ್ರತೀ ಹೆಕ್ಟೇರ್‌ಗೆ ರೂ.2350 ವಿಮಾ ಕಂತನ್ನು ಪಾವತಿಸಬೇಕಾಗಿದೆ.
ವಿಮಾ ಕಂತನ್ನು ಜೂನ್ 30ರೊಳಗೆ ರೈತರು ರಾಷ್ಟ್ರೀಕೃತ/ಸಹಕಾರಿ/ ವಾಣಿಜ್ಯ ಬ್ಯಾಂಕ್‌ಗಳ ಮುಖಾಂತರ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಉಡುಪಿ ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.