×
Ad

ಉಡುಪಿ: 35ನೆ ಘರ್‌ಘರಾಂತು ಭಜನಾ ಕಾರ್ಯಕ್ರಮ

Update: 2018-06-12 21:21 IST

ಉಡುಪಿ, ಜೂ.12: ಜಿಎಸ್‌ಪಿ ಸಮಾಜದ ಪ್ರತಿ ಮನೆಯಲ್ಲೂ ನಿತ್ಯ ಭಜನಾ ಕಾರ್ಯಕ್ರಮ ನಡೆಯುತ್ತಿರಬೇಕೆಂಬ ಉದ್ದೇಶದಿಂದ ಘರ್ ಘರಾಂತು ಭಜನಾಂತರಂಗ ತಂಡದ ವತಿಯಿಂದ 35ನೇ ವಾರದ ಭಜನಾ ಕಾರ್ಯ ಕ್ರಮವು ರವಿವಾರ ಒಳಕಾಡಿನ ರಾಧಾಕೃಷ್ಣ ರಾವ್ ಅವರ ಮನೆಯಲ್ಲಿ ನಡೆಯಿತು.

ಭಜನಾ ಕಾರ್ಯಕ್ರಮಕ್ಕೆ ರಾಧಾಕೃಷ್ಣ ರಾವ್ ದಂಪತಿ ಚಾಲನೆ ನೀಡಿದರು. ಚೇಂಪಿ ರಾಮಚಂದ್ರ ಅನಂತ ಭಟ್ ಮಾತನಾಡಿ, ಸಮಾಜದ ಏಳಿಗೆಗಾಗಿ ಪ್ರತೀ ಮನೆಯಲ್ಲೂ ಧಾರ್ಮಿಕ ಶ್ರದ್ಧಾ ಭಾವನೆ ಬೆಳೆಸಲು ಭಜನಾ ಕಾರ್ಯ ಕ್ರಮವು ಒಂದು ಪ್ರೇರಣಾಶಕ್ತಿಯಾಗಿ ಮೂಡಿಬಂದಿದೆ ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕರಾದ ರವೀಂದ್ರ ನಾಯಕ್, ಗಣೇಶ್ ಪೈ, ಜಯಂತ್ ನಾಯಕ್, ಗಣಪತಿ ಶ್ಯಾನುಭಾಗ್, ಶಾಲಿನಿ ಶೆಣೈ, ರಶ್ಮಿ ಶೆಣೈ, ಶಾಂತಾರಾಮ ಪೈ, ಅಕ್ಷತ ಶೆಣೈ, ಕಾವ್ಯ, ಶೈಲಾ ಕಾಮತ್, ತಬ್ಲಾದಲ್ಲಿ ಹರೀಶ್ ನಾಯಕ್, ಹಾರ್ಮೋನಿಯಂನಲ್ಲಿ ನಿತ್ಯಾನಂದ ನಾಯಕ್, ದೇವದಾಸ ಕಾಮತ್ ಸಹಕರಿಸಿದರು.

ಈ ತಂಡವು ಪ್ರತಿ ರವಿವಾರ ಜಿಎಸ್‌ಬಿ ಸಮಾಜದ ಆಹ್ವಾನಿತರ ಮನೆಗೆ ತೆರಳಿ ಒಂದು ಗಂಟೆಗಳ ಕಾಲ ಭಜನಾ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಿಕೊಂಡು ಬರುತ್ತಿದೆ. ಕಾರ್ಯಕ್ರಮದ ಬಳಿಕ ಮನೆಯ ಯಜಮಾನನಿಗೆ ಒಂದು ಜೊತೆ ತಾಳ, ದೇವರ ಪ್ರಸಾದ, ಭಜನೆ ಪುಸ್ತಕ ುತ್ತು ಸಿಡಿಯನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News