ಜೂ.13ರಂದು ರಾಹುಲ್ ನೇತೃತ್ವದಲ್ಲಿ ಇಫ್ತಾರ್ ಕೂಟ: ಯು.ಟಿ.ಖಾದರ್ ದೆಹಲಿಗೆ
Update: 2018-06-12 21:54 IST
ಮಂಗಳೂರು, ಜೂ. 12: ಕರ್ನಾಟಕ ರಾಜ್ಯ ಸರಕಾರದ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ. ಖಾದರ್ ಅವರು ಮಂಗಳವಾರ ರಾತ್ರಿ 11:30ಕ್ಕೆ ಬೆಂಗಳೂರಿನಿಂದ ವಿಮಾನ ಮೂಲಕ ದೆಹಲಿಗೆ ತೆರಳಲಿದ್ದಾರೆ.
ಜೂ.13ರಂದು ಸಂಜೆ ಹೊಸದಿಲ್ಲಿಯ ಸರ್ದಾರ್ ಪಟೇಲ್ ರಸ್ತೆಯ ತಾಜ್ ಪ್ಯಾಲೆಸ್ ಪಂಚತಾರಾ ಹೋಟೆಲ್ ನಲ್ಲಿ ಎಐಸಿಸಿ ವತಿಯಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಜರಗುವ ಇಫ್ತಾರ್ ಕೂಟದಲ್ಲಿ ಸಚಿವ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ.
ಬುಧವಾರ ತಡರಾತ್ರಿ ದೆಹಲಿಯಿಂದ ಹೊರಟು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಜೂ.14 ರಂದು ಬೆಳಗ್ಗೆ 6:30ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪುವರು. ಜೂ.14ರಂದು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವ ಖಾದರ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.