×
Ad

ಪೆರ್ಡೂರು ಗ್ರಾಪಂ ಉಪ ಚುನಾವಣೆ‌ಗೆ ತಡೆಯಾಜ್ಞೆ

Update: 2018-06-12 22:42 IST

ಉಡುಪಿ, ಜೂ.12: ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಜೂ.14ರಂದು ನಡೆಯಬೇಕಿದ್ದ ಪೆರ್ಡೂರು ಗ್ರಾಪಂ ನ ಪೆರ್ಡೂರು 6ನೇ ವಾರ್ಡಿನ ಉಪಚುನಾವಣೆ ಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಈ ಒಂದು ಸ್ಥಾನ ಕ್ಕಾಗಿ ಮತದಾನ‌ಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಮೂವರು ಸ್ಪರ್ಧಾಕಣದಲ್ಲಿದ್ದರು. ಆದರೆ ಹೈಕೋರ್ಟ್ ಜೂ.11ರಂದು ನೀಡಿದ ಮಧ್ಯಂತರ ತಡೆಯಾಜ್ಞೆಯಂತೆ 14ರ ಚುನಾವಣೆ‌ಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಉಡುಪಿ ತಹಶೀಲ್ದಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News