ಸುಡಾನ್‌ಗೆ ಕೆಎಸ್‌ರಿಲಿಫ್‌ನಿಂದ 458 ಟನ್ ಮಾನವೀಯ ನೆರವು

Update: 2018-06-12 17:19 GMT

ಜಿದ್ದಾ, ಜೂ. 12: ಕಿಂಗ್ ಸಲ್ಮಾನ್ ಹ್ಯುಮೇನಿಟೇರಿಯನ್ ಏಡ್ ಆ್ಯಂಡ್ ರಿಲೀಫ್ ಸೆಂಟರ್ (ಕೆಎಸ್‌ರಿಲೀಫ್) ರಿಪಬ್ಲಿಕ್ ಆಫ್ ಸುಡಾನ್‌ಗೆ ನೀಡಿರುವ 458 ಟನ್ ಆಹಾರ, ಆಶ್ರಯ ಮತ್ತು ವೈದ್ಯಕೀಯ ನೆರವುಗಳನ್ನು ಹೊತ್ತ ಹಡಗೊಂದು ಸುಡಾನ್ ಬಂದರನ್ನು ತಲುಪಿದೆ.

ಸುಡಾನ್‌ನ ಜನರಿಗೆ ನೆರವು ನೀಡುವಂತೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನೀಡಿರುವ ಸೂಚನೆಗಳಂತೆ ನೆರವು ಸಾಮಗ್ರಿಗಳನ್ನು ಕಳುಹಿಸಲಾಗಿದೆ.

ಸುಡಾನ್‌ನ ಕೆಂಪು ಸಮುದ್ರ ವಲಯದಲ್ಲಿರುವ ಎರಡು ರಾಜ್ಯಗಳು ಮತ್ತು ನಾರ್ತ್ ಕೊರ್ಡೊಫನ್ ರಾಜ್ಯದಲ್ಲಿ ಈ ಸಾಮಗ್ರಿಗಳನ್ನು ವಿತರಿಸಲಾಗುವುದು.

ಸುಡಾನ್‌ನಲ್ಲಿರುವ 40ಕ್ಕೂ ಅಧಿಕ ಆರೋಗ್ಯ ಕೇಂದ್ರಗಳಿಗೆ ಕೆಎಸ್‌ರಿಲೀಫ್ ವೈದ್ಯಕೀಯ ನೆರವುಗಳನ್ನೂ ಪೂರೈಸಲಿದೆ. ಇದರ ಪ್ರಯೋಜನವನ್ನು 50,000ಕ್ಕೂ ಅಧಿಕ ಸುಡಾನಿಗರು ಪಡೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News