ಉಚ್ಚಿಲದ ಸ್ವಾತಿಗೆ ಮರು ಮೌಲ್ಯಮಾಪನದಲ್ಲಿ 10 ಅಂಕ ಹೆಚ್ಚಳ
Update: 2018-06-12 22:50 IST
ಪಡುಬಿದ್ರೆ, ಜೂ. 12: ಎಸೆಸೆಲ್ಸಿ ಮೌಲ್ಯ ಮಾಪನದಿಂದಾದ ಎಡವಟ್ಟಿನಿಂದ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ವಾತಿ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 10 ಅಂಕಗಳಿಸಿದ್ದಾಳೆ.
ಕನ್ನಡ 123, ಇಂಗ್ಲಿಷ್ 99, ಹಿಂದಿ 100, ಗಣಿತ 99, ವಿಜ್ಞಾನ 99, ಸಮಾಜದಲ್ಲಿ 100 ಅಂಕಗಳಿಸಿರುವ ಈಕೆ 620 ಅಂಕ ಗಳಿಸಿದ್ದು, ಶೇ.99.20 ಸಾಧನೆಗೈದಿರುತ್ತಾಳೆ. ಈಕೆ ಶಿವಾನಂದ ಕಾಮತ್, ಶೈಲಾ ಕಾಮತ್‌ರ ಪುತ್ರಿ.