ಅಫ್ಘಾನ್: ಆತ್ಮಹತ್ಯಾ ಸ್ಫೋಟ; 5 ಪೊಲೀಸರ ಸಾವು

Update: 2018-06-12 17:22 GMT

ಕಾಬೂಲ್, ಜೂ. 12: ಅಫ್ಘಾನಿಸ್ತಾನದ ಪೂರ್ವ ಘಝ್ನಿ ಪ್ರಾಂತದಲ್ಲಿ ಸೇನಾ ಹಮ್ವೀ ವಾಹನವೊಂದರ ಮೂಲಕ ನಡೆಸಿದ ಆತ್ಮಹತ್ಯಾ ಸ್ಫೋಟದಲ್ಲಿ ಕನಿಷ್ಠ ಐವರು ಪೊಲೀಸರು ಹತರಾಗಿದ್ದಾರೆ ಎಂದು ಅಫ್ಘಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಕರ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ದಾಳಿಯಲ್ಲಿ ಓರ್ವ ಜಿಲ್ಲಾ ಗವರ್ನರ್ ಮತ್ತು 18 ಪೊಲೀಸರು ಸೇರಿದಂತೆ 26 ಮಂದಿ ಗಾಯಗೊಂಡಿದ್ದಾರೆ ಎಂದು ಘಝ್ನಿ ಗವರ್ನರ್‌ರ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News