ಕೊಳ್ತಿಗೆ ಸೌಹಾರ್ದ ಸಮಿತಿಯಿಂದ ಈದ್ ಕಿಟ್ ವಿತರಣೆ

Update: 2018-06-13 10:10 GMT

ಪುತ್ತೂರು, ಜೂ.13: ಕೋಮು ಸೌಹಾರ್ದಕ್ಕೆ ಶ್ರಮಿಸುತ್ತಿರುವ ಕೊಳ್ತಿಗೆ ಸೌಹಾರ್ದ ಸಮಿತಿಯ ಸ್ಥಾಪಕಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು ನೇತೃತ್ವದಲ್ಲಿ ಸೋಮವಾರ ಕೊಳ್ತಿಗೆ ಗ್ರಾಮದ ಐದು ಬಡ ಮುಸ್ಲಿಮ್ ಕುಟುಂಬಗಳಿಗೆ ಈದ್ ನಿಮಿತ್ತ ಉಚಿತ ಬಟ್ಟೆಬರೆ, ಹಬ್ಬದ ಅಡುಗೆ ಸಾಮಗ್ರಿ ಹಾಗೂ ಮುಂದಿನ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

''ಪ್ರತೀ ವರ್ಷ ಕೊಳ್ತಿಗೆ ಸೌಹಾರ್ಧ ಸಮಿತಿಯ ವತಿಯಿಂದ ಸೌಹಾರ್ದ ಇಫ್ತಾರ್ ಕೂಟಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಕಡು ಬಡತನದಲ್ಲಿರುವ 5 ಕುಟುಂಬಗಳ ಎಲ್ಲ ಸದಸ್ಯರಿಗೆ ಬಟ್ಟೆ, ಹಬ್ಬದ ಅಡುಗೆ ಸಾಮಗ್ರಿ ಹಾಗೂ ಮುಂದಿನ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ'' ಎಂದು ಸಮಿತಿಯ ಸ್ಥಾಪಕ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು ತಿಳಿಸಿದರು.

ಈ ಸಂದರ್ದಲ್ಲಿ ಕೊಳ್ತಿಗೆ ಗ್ರಾಪಂ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಸೌಹಾರ್ದ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ತಾರ್ ಅಮಲ, ಪದಾಧಿಕಾರಿಗಳಾದ ಲೋಹಿತ್ ಬಾರಿಕೆ, ರತನ್ ರೈ ಪೆರ್ಲಂಪಾಡಿ, ವಿಜೇಶ್ ಕೊಳ್ತಿಗೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News