ಸಂತ ಅಲೋಶಿಯಸ್ ಕಾಲೇಜಿಗೆ 22ನೇ ರ್ಯಾಂಕ್

Update: 2018-06-13 12:02 GMT

ಮಂಗಳೂರು, ಜೂ.13: ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯತ್ತ)ಕಾಲೇಜು,ವೀಕ್‌ಹನ್ಸ ಸರ್ವೆ 2018 ನಡೆಸಿದ ಭಾರತದಉನ್ನತ ವಿಜ್ಞಾನ ಕಾಲೇಜುಗಳ ಸರ್ವೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿಉನ್ನತ 50 ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದು, 22ನೇ ರ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

ಸಂತ ಅಲೋಶಿಯಸ್‌ಕಾಲೇಜು ಈ ಸರ್ವೆಯಲ್ಲಿಒಟ್ಟು 330 ಅಂಕಗಳನ್ನು ಗಳಿಸಿ 22ನೇ ರ್ಯಾಂಕ್‌ನ್ನು ಪಡೆದುಕೊಂಡಿದೆ. ಹಾಗೆಯೇರಾಜ್ಯಕ್ಕೆ 4ನೇ ಅತ್ಯುನ್ನತ ವಿಜ್ಞಾನ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದೆ. ಅವಿಭಜಿತ ದ.ಕ.ಜಿಲ್ಲೆಯ ವಿಜ್ಞಾನ ಕಾಲೇಜುಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ವಿದ್ಯಾರ್ಥಿ ಅಧ್ಯಾಪಕರ ಅನುಪಾತ, ಕಾಲೇಜಿನ ಮೂಲ ಸೌಕರ್ಯ, ಪ್ರಾಧ್ಯಾಪಕರ ಶೈಕ್ಷಣಿಕ ಅರ್ಹತೆ, ನೇಮಕ ಮತ್ತ ಸಂಶೋಧನಾ ಅನುಭವ ಮೊದಲಾದ ಮಾನದಂಡಗಳನ್ನು ಪರಿಗಣಿಸಿ ಈ ರ್ಯಾಂಕ್‌ ನೀಡಲಾಗಿದೆ.

ಈ ದೇಶದ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳಾದ ಹನ್ಸ, ದಿ ವೀಕ್ ಮತ್ತು ಇಂಡಿಯಾ ಟುಡೇ ಮ್ಯಾಗಜಿನ್‌ಗಳ ಸಹಯೋಗದೊಂದಿಗೆಕಾರ್ಯಚರಿಸುತ್ತಿರುವ ಎಂ ಡಿ ಆರ್ ಎ, ಎಂ ಎಚ್‌ಆರ್ ಡಿ ಯಎನ್ ಐ ಆರ್ ಎಫ್‌ಗಳು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಕುರಿತ ಬಹಳ ಮುಖ್ಯವಾದ ವಾರ್ಷಿಕ ಸರ್ವೆಗಳಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಹೆಸರು ಸೇರಿರುವುದು ಈ ಸಂಸ್ಥೆಗೆ ಗರಿಮೆಯಾಗಿದೆ.

ಈ ಹಿಂದೆ ನಡೆದ ಇಂಡಿಯಾಟುಡೇ ಎಂ ಡಿ ಆರ್ ಎ ಸರ್ವೆಯಲ್ಲಿ ಭಾರತದ ಅತ್ಯುನ್ನತ 100 ವಿಜ್ಞಾನ ಕಾಲೇಜುಗಳಲ್ಲಿಅಲೋಶಿಯಸ್ ಕಾಲೇಜು 44 ನೇ ಸ್ಥಾನವನ್ನು ಪಡೆದುಕೊಂಡಿತ್ತು. ಹಾಗೆಯೇಎನ್ ಐ ಆರ್‌ಎಫ್ ನಡೆಸಿದ ಸರ್ವೆಯಲ್ಲಿ 94ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಉನ್ನತ 100 ವಿಜ್ಞಾನ ಕಾಲೇಜುಗಳಲ್ಲಿ ಸ್ಥಾನ ಪಡೆದ ಏಕೈಕ ಕಾಲೇಜು ಆಗಿ ಸಂತ ಅಲೋಶಿಯಸ್ (ಸ್ವಾಯತ್ತ)ಕಾಲೇಜು ಮೂಡಿ ಬಂದಿತ್ತು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಬಾರಿ ಪದವಿ ಕೋರ್ಸುಗಳಿಗೆ ಸುಮಾರು 3000 ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಸುಮಾರು 1500 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ ಎಂದುಕಾಲೇಜಿನ ಮೂಲಗಳು ತಿಳಿಸಿವೆ. ಹಾಗೆಯೇಈ ಶೈಕ್ಷಣಿಕ ವರ್ಷ (2018-19) ದಲ್ಲಿ ದ್ವಿತೀಯ ಬಿ.ಕಾಂ ನಲ್ಲಿಎಸಿಸಿಎಗಾಗಿ ಸಿ ಎ ಟ್ರೈನಿಂಗ್ ಹೊಸ ಕೋರ್ಸುಗಳನ್ನು ಪರಿಚಯಿಸಲಾಗಿದೆ. ಜೊತೆಗೆ ಮಾಸ್ಟರ್‌ಇನ್‌ಫೈನಾನ್ಸ್ ಮತ್ತು ಅನಾಲಿಟಿಕ್ಸ್, ಹಾಗೂ ಮಾಸ್ಟರ್‌ಇನ್ ಫುಡ್, ನ್ಯೂಟ್ರಿಶಿನ್ ಮತ್ತು ಡಯಾಟಿಕ್ಸ್, ಮಾಸ್ಟರ್‌ಇನ್ ಬಿಗ್ ಡೇಟಾಅನಾಲಿಟಿಕ್ಸ್, ಫರ್ ಫಾರ್ಮಿಂಗ್‌ಆರ್ಟ್ಸ್ ಮೊದಲಾದ ಹೊಸ ಕೋರ್ಸುಗಳನ್ನು ತೆರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News