×
Ad

ಸಿಂಡ್‌ಆರ್‌ಸೆಟಿಯಲ್ಲಿ ‘ಕಂಪ್ಯೂಟರೈಸ್ಡ್ ಅಕೌಂಟಿಂಗ್’ಉಚಿತ ತರಬೇತಿ

Update: 2018-06-13 21:05 IST

ಉಡುಪಿ, ಜೂ.13: ಮಣಿಪಾಲದ ಸಿಂಡ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ (SyndRSETI  ) ಇಲ್ಲಿ ನಿರುದ್ಯೋಗಿ ಯುವಜನತೆಗಾಗಿ ಜೂ.25ರಿಂದ ಒಂದು ತಿಂಗಳ (30ದಿನ) ಅವಧಿಯ ಉಚಿತ ‘ಕಂಪ್ಯೂಟರೈಸ್ಡ್ ಅಕೌಂಟಿಂಗ್’ ತರಬೇತಿಯನ್ನು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.

ನಿರುದ್ಯೋಗಳಿಗೆ ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬಿ ಬದುಕನ್ನು ಸಾಗಿಸಲು ನೆರವಾಗಬಲ್ಲ ಈ ತರಬೇತಿಯ ವೇಳೆ ಊಟ-ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ತರಬೇತಿಯ ವೇಳೆ ಆಯಾ ಕ್ಷೇತ್ರದ ಕುರಿತು ವಿವರವಾದ ಮಾಹಿತಿ ಹಾಗೂ ಪ್ರಾತ್ಯಕ್ಷತೆಯನ್ನು ನೀಡಲಾಗುತ್ತದೆ. ಜೊತೆಗೆ ಉದ್ಯಮಶೀಲತೆ, ವ್ಯಕ್ತಿತ್ವ ವಿಕಸನಕೆ್ಕ ಸಂಬಂಧಿಸಿ ಮಾಹಿತಿ ನೀಡಲಾಗುತ್ತದೆ.

ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯ 18ರಿಂದ 45ರೊಳಗಿನ ವಯೋಮಾನದ ನಿರುದ್ಯೋಗಿ ಯುವತಿ ಯರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುವರು. ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ತಮ್ಮ ಹೆಸರು, ಪೂರ್ಣ ವಿಳಾಸ, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿಯ ಹೆಸರು, ಮುಂತಾದ ಮಾಹಿತಿಯೊಂದಿಗೆ ಅರ್ಜಿಯನ್ನು ಖಾಲಿ ಹಾಳೆಯಲ್ಲಿ ಬರೆದು ಜೂ.20ರೊಳಗೆ ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡುವಂತೆ ಕೋರಲಾಗಿದೆ.

ವಿಳಾಸ: ಸಿಂಡ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ (SyndRSETI) ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಸಂಕೀರ್ಣ, ಮಣಿಪಾಲ -576104. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:0820-2570455, 9449862665 ಸಂಪರ್ಕಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News