ಉಡುಪಿ ನಗರಸಭೆ, ಪುರಸಭೆ, ಪ.ಪಂಚಾಯತ್: ಕರಡು ಮೀಸಲಾತಿ ಪಟ್ಟಿ ಬಿಡುಗಡೆ
Update: 2018-06-13 21:06 IST
ಉಡುಪಿ, ಜೂ.13: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ್‌ವಾರು ಕರಡು ಮೀಸಲಾತಿ ಪಟ್ಟಿಯನ್ನು ಬೆಂಗಳೂರಿನ ನಗರಾಭಿವೃದ್ದಿ ಸಚಿವಾಲಯ ಮೇ 25ರಂದು ಹೊರಡಿಸಿದೆ.
ಈ ಅಧಿಸೂಚನೆಯನ್ನು ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರ ಆವಹನೆಗಾಗಿ ಪ್ರಕಟಿಸಲಾಗಿದೆ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.