ಉಡುಪಿ: ವಾರಸುದಾರರಿಗೆ ಸೂಚನೆ
Update: 2018-06-13 21:08 IST
ಉಡುಪಿ, ಜೂ.13: ಉಡುಪಿ ಇಂದ್ರಾಳಿ ರೈಲ್ವೆ ಸ್ಟೇಶನ್ ಬಳಿ ತೀವ್ರ ಅಸ್ವಸ್ಥಗೊಂಡಿದ್ದ ಸುರೇಶ್ ಮೂಲ್ಯ (40 ವರ್ಷ) ಎಂಬ ವ್ಯಕ್ತಿಯನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರು ಚಿಕಿತ್ಸೆ ಫಲಕಾರಿ ಯಾಗದೇ ಜೂ.12ರಂದು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಗೋಧಿ ಮೈ ಬಣ್ಣ, ನೀಲಿ ಶರ್ಟ್ ಮತ್ತು ಸಿಮೆಂಟ್ ಕಲರ್ ಪ್ಯಾಂಟ್ ಧರಿಸಿದ್ದು, ಮೃತ ವ್ಯಕ್ತಿಯ ವಾರಸುದಾರರ ಯಾರಾದರೂ ಇದ್ದಲ್ಲಿ ಮಣಿಪಾಲ ಪೊಲೀಸ್ ಠಾಣೆ (ದೂ.ಸಂ. 0820-2570328, 9480805448) ಅಥವಾ ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಮಣಿಪಾಲ ಪೊಲೀಸ್ ಸ್ಟೇಶನ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.