ನೇಣು ಬಿಗಿದು ಆತ್ಮಹತ್ಯೆ
Update: 2018-06-13 22:21 IST
ಬ್ರಹ್ಮಾವರ, ಜೂ.13: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ಮನೆಯ ಬಳಿ ಇರುವ ಹಾಡಿಯಲ್ಲಿ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಂತಾರು ಗ್ರಾಮದ ಚಾಂತಾರು 5ಸೆಂಟ್ಸ್‌ನ ಸುಮತಿ ಫಾರಂ ಬಳಿ ನಡೆದಿದೆ.
ಮೃತರನ್ನು ಹರೀಶ್ ಪೂಜಾರಿ (55) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ 4:30ರಿಂದ ಇಂದು ಬೆಳಗ್ಗೆ 9 ಗಂಟೆ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.