ಕೊಣಾಜೆ: ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಚಿಕಿತ್ಸೆ

Update: 2018-06-13 17:07 GMT

ಕೊಣಾಜೆ, ಜೂ. 13: ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ವೈದ್ಯರುಗಳಿಂದ 26 ವರ್ಷ ವಯಸ್ಸಿನ ಶ್ರೀಪಾದ ನಾಯ್ಕಿ (ಹೆಸರು ಬದಲಾಯಿಸಲಾಗಿದೆ) ಎಂಬುವವರ ಜಟಿಲವಾದ ಸಮಸ್ಯೆಗೆ ಅತ್ಯಾಧುನಿಕ ರೀತಿಯಲ್ಲಿ ಸುರಕ್ಷಿತ ಹಾಗೂ ಯಶಸ್ವಿ ಚಿಕಿತ್ಸೆ ನೀಡಲಾಗಿದೆ.

ಈ ರೋಗಿಯ ಕಳೆದ ಒಂದು ತಿಂಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಆತನಿಗೆ ತಪಾಸಣೆ ನಡೆಸಿದಾಗ ತೀವ್ರವಾದ ಪ್ರಾಂಕ್ರಿಯಾಟೈಟಿಸ್ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂತು ಹಾಗೂ ಮೆದೋಜ್ಜೀರಕ ಗ್ರಂಥಿಗೆ ಸಮೀಪದಲ್ಲಿ ದೊಡ್ಡದೊಂದು ಅಪಾಯಕಾರಿ ತುಂಬಿಕೊಂಡಿರುವ ಗುಳ್ಳೆ ಪತ್ತೆಯಾಗಿತ್ತು. ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾದ ನಂತರ ಇದಕ್ಕೆ ಶಸ್ತ್ರಚಿಕಿತ್ಸೆ ಅಥವಾ ಔಷಧಿಗಳಿಂದ ಉಪಚಾರ ಮಾಡುವುದು ಕ್ಷಿಷ್ಟಕರ ಎಂದು ಕಂಡು ಬಂದುದರಿಂದ ಡಾ.ಚಂದ್ರಶೇಖರ್ ಸೊರಕೆ ಹಾಗೂ ಅವರ ವೈದ್ಯಕೀಯ ತಂಡ ಇದರ ಬಗ್ಗೆ ಸಮಾಲೋಚಿಸಿದ್ದರು.

ಮುಂದಿನ ಕೆಲವೇ ದಿನಗಳಲ್ಲಿ ಸಿಸ್ಟಿಕ್ ಚೀಲ ಹೆಚ್ಚಿನ ಗಾತ್ರದಲ್ಲಿ ಬೆಳೆದು 23 ಸೆಂ.ಮೀ ನಷ್ಟು ಆವರಿಸಿತ್ತು. ಶಸ್ತ್ರಚಿಕತ್ಸೆ ಅಥವಾ ಟ್ಯೂಬ್‌ನಿಂದಸರಿಪಡಿಸಲು ಪ್ರಯತ್ನಿಸಿದರೆ ರೋಗಿಗೆ ಉಂಟಾಗಬಹುದಾದ ತೊಡಕುಗಳ ತೀವ್ರತೆ ಹೆಚ್ಚಾಗಿದ್ದು, ಇವುಗಳಿಂದ ಚೇತರಿಸಿಕೊಳ್ಳುವುದು ಸಾಧ್ಯವಿಲ್ಲವೆಂದು ಕಂಡು ಬಂದುದರಿಂದ ಡಾ.ಚಂದ್ರಶೇಖರ್ ಸೊರಕೆ ಹಾಗೂ ಡಾ.ಬಿ.ಕೆ.ಶೆಟ್ಟಿಯವರ ನೇತೃತ್ವದ ವೈದ್ಯಕೀಯ ತಂಡವು ಎಂಡೋಸ್ಕೋಪಿಕ್ ಅಲ್ಟ್ರಾ ಸೌಂಡ್ ಎಂಬಾ ಅತ್ಯಾಧುನಿಕ ಚಿಕಿತ್ಸಾ ವಿಧಾನವನ್ನು ಬಳಸಲು ನಿರ್ಧರಿಸಿದರು.

ಈ ಎಂಡೋಸ್ಕೋಪಿಕ್ ಅಲ್ಟ್ರಾ ಸೌಂಡ್‌ನ ಸೂಕ್ಷ್ಮ ದೃಶ್ಯೀಕರಣದಿಂದ ಗ್ರಂಥೀಯ ಪಕ್ಕದಲ್ಲಿರುವ ಸೂಕ್ಷ್ಮ ದೃಶ್ಯೀಕರಣದಿಂದ ಗ್ರಂಥೀಯ ಪಕ್ಕದಲ್ಲಿರುವ ಸೂಕ್ಷ್ಮ ರಕ್ತನಾಳಗಳು ಹಾಗೂ ಇತರೆ ಯಾವುದೇ ಪ್ರಮುಖ ಅಂಗರಚನೆಗಳು ಹಾನಿಗೊಳ್ಳದಂತೆ ಸಿಸ್ಟ್ ಚೀಲಗಳನ್ನು ಪಂಚರ್ ಮಾಡಿ ಎರಡು ಸ್ಟಂಟ್‌ಗಳನ್ನು ಅಳವಡಿಸಲಾಯಿತು. ಮುಂದಿನ 48 ಗಂಟೆಗಳೊಳಗೆ ರೋಗಿಯ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಈಗ ಎರಡು ತಿಂಗಳ ಬಳಿಕ ಆತ ಸಂಪೂರ್ಣ ಚೇತರಿಸಿಕೊಂಡಿದ್ದು ದೈನಂದಿನ ಜೀವನವನ್ನು ನಡೆಸುವಂತಾಗಿದೆ.

ಇದಕ್ಕಾಗಿ ಬಳಸಿರುವ ಕಾರ್ಯ ವಿಧಾನವು ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ವಿಧಾನವಾಗಿದ್ದು, ತೀವ್ರ ಸ್ವರೂಪದ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ಅಡ್ಡ ಪರಿಣಾಮ ಹಾಗೂ ತೊಡಕುಗಳಿಗೆ, ಅತೀ ಕ್ಲಿಷ್ಟಕರವಾದ ಪ್ಯಾಂಕ್ರಿಯಸ್ ಮತ್ತು ಪಿತ್ತರಸ ಕಾಯಿಲೆಗಳಿಗೆ ಇದು ಅತ್ಯಂತ ಯಶಸ್ವೀ ಹಾಗೂ ಸುರಕ್ಷಿತವಾದ ನಿರ್ಣಯಾತ್ಮಕ ಚಿಕಿತ್ಸಾ ವಿಧಾನ ಆಗಿರುತ್ತದೆ.

ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಇಂತಹ ವಿಶೇಷ ಹಾಗೂ ಅತ್ಯಾಧುನಿಕ ಎಂಡೋಸ್ಕೋಪಿಕ್ ಅಲ್ಟ್ರಾ ಸೌಂಡ್ ಯಂತ್ರ ಅಳವಡಿಸಿದ್ದು ನುರಿತ ವೈದ್ಯರ ಸಹಾಯದೊಂದಿಗೆ ಈ ತಂತ್ರಜ್ಞಾನವನ್ನು ಉಪಯೋಗಿಸಿ ರೋಗಿಗಳಿಗೆ ಸುರಕ್ಷಿತವಾಗಿ ಪರಿಹಾರ ನೀಡಲು ಶ್ರಮಿಸುತ್ತಿದೆ.

ಇದೇ ರೀತಿಯಲ್ಲಿ ಶ್ವಾಸಕೋಶದ ಸಮಸ್ಯೆಗಳಿಗೆ ಎಂಡೋಸ್ಟೋಪಿಕ್ ಬ್ರೋಂಕಿಯಲ್ ಅಲ್ಟ್ರಾ ಸೌಂಡ್ ಎಂಬ ಆಧುನಿಕ ತಂತ್ರಜ್ಞಾನ ಹಾಗೂ ನುರಿತ ವೈದ್ಯರ ಸೇವೆಗಳು ಪ್ರಾರಂಭವಾಗಿರುತ್ತದೆ. ಇಯುಎಸ್ ಮತ್ತು ಇಬಿಯುಎಸ್ ನಂತಹ ಅತ್ಯಾಧುನಿಕ ವಿಧಾನಗಳ ಅನುಷ್ಟಾನದಿಂದ ಈ ಜಿಲ್ಲೆಯ ಮತ್ತು ನೆರೆಹೊರೆಯ ಜನರಿಗೆ ಸುಲಭ ಹಾಗೂ ಸುರಕ್ಷಿತ ಚಿಕಿತ್ಸೆಯು ಕೈಗೆಟಕುವ ವೆಚ್ಚದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ ಎಂದು ವೈದ್ಯಕೀಯ ಅಧೀಕ್ಷಕರಾದ ಮೇಜರ್ ಡಾ.ಶಿವಕುಮಾರ್ ಹಿರೇಮಠ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News