ಲಂಡನ್: ಹಿಜಾಬ್‌ಧಾರಿ ಮಹಿಳೆಯನ್ನು ಸಮರ್ಥಿಸಿದ ಭಾರತೀಯನಿಗೆ ಜನಾಂಗೀಯ ನಿಂದನೆ

Update: 2018-06-13 17:37 GMT

 ಲಂಡನ್, ಜೂ. 13: 28 ವರ್ಷದ ಭಾರತ ಮೂಲದ ವಿದ್ಯಾರ್ಥಿಯೊಬ್ಬರ ಮೇಲೆ ಬ್ರಿಟನ್ ಪ್ರಜೆಯೊಬ್ಬ ಜನಾಂಗೀಯ ನಿಂದನೆ ನಡೆಸಿದ ಘಟನೆಯೊಂದು ವರದಿಯಾಗಿದೆ.

ಹಿಜಾಬ್ ಧರಿಸಿದ ಮಹಿಳೆಯೊಬ್ಬರ ಬಗ್ಗೆ ಬ್ರಿಟನ್ ಪ್ರಜೆಯು ಆಡಿದ ಲಿಂಗ ತಾರತಮ್ಯದ ಮಾತುಗಳಿಗೆ ಭಾರತ ಮೂಲದ ವಿದ್ಯಾರ್ಥಿಯು ಆಕ್ಷೇಪ ವ್ಯಕ್ತಪಡಿಸಿರುವುದೇ ಜನಾಂಗೀಯ ನಿಂದನೆಗೆ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.

  ಕೇಂಬ್ರಿಜ್ ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನದ ವಿದ್ಯಾರ್ಥಿ ರಿಕೇಶ್ ಅಡ್ವಾಣಿಯು, ಬ್ರಿಟನ್ ವ್ಯಕ್ತಿಯು ಮಹಿಳೆಯ ಬಗ್ಗೆ ಆಡಿದ ಮಾತುಗಳಿಗಾಗಿ ಆಕ್ಷೇಪ ವ್ಯಕ್ತಪಡಿಸಿದರು.

 ಆಗ ಕೆರಳಿದ ಬಿಟನ್ ವ್ಯಕ್ತಿಯು, ‘‘ಬಾಯ್ಮುಚ್ಚು’’ ಎಂದನಲ್ಲದೆ, ‘‘ಬ್ರೆಕ್ಸಿಟ್ (ಬ್ರಿಟನ್‌ನಿಂದ ತೊಲಗು), ಮನೆಗೆ ಹೋಗು’’ ಎಂಬುದಾಗಿ ನಿಂದನೆಯ ಸುರಿಮಳೆಗೈದ ಎಂಬುದಾಗಿ ‘ಕೇಂಬ್ರಿಜ್ ನ್ಯೂಸ್’ ವರದಿ ಮಾಡಿದೆ.

ಇದರಿಂದ ರೋಸಿ ಹೋದ ವಿದ್ಯಾರ್ಥಿಯು ಪೊಲೀಸರಿಗೆ ದೂರು ನೀಡಿದರು.

‘‘ಅವನ ಮಾತುಗಳನ್ನು ಕೇಳಿ ನನಗೆ ಅಸಹ್ಯವಾಯಿತು. 2018ರಲ್ಲೂ ಇಂಥ ಅಸಹಿಷ್ಣು ಜನರಿದ್ದಾರೆ ಎನ್ನುವುದನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ’’ ಎಂದು ಅಡ್ವಾಣಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News