ಮೂಳೂರು ಮರ್ಕಝ್ ನಲ್ಲಿ ಸಾಮೂಹಿಕ ಇಪ್ತಾರ್ ಕೂಟ
ಉಡುಪಿ, ಜೂ. 14: ಇಂದಿನ ವಿದ್ಯಾರ್ಥಿಗಳು ಮುಂದಿನ ಪೀಳಿಗೆಯ ನಾಯಕರಾಗಿದ್ದಾರೆ. ವಿದ್ಯಾರ್ಜನೆ ಮಾಡುವ ಸಮಯದಲ್ಲಿ ಉತ್ತಮ ಗುಣ ನಡತೆಗಳನ್ನು ಮೈಗೂಡಿಸಿಕೊಳ್ಳುತ್ತಾ ಗಮನಹರಿಸಬೇಕು ಎಂದು ಮೂಳೂರು ಅಲ್ ಇಹ್ಸಾನ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಲ್ ಹಾಜ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರಿನ ಅಧೀನ ಸಂಸ್ಥೆ ಮೂಳೂರು ಮರ್ಕಜ್ ತಅಲೀಮಿಲ್ ಇಹ್ಸಾನ್ ನಲ್ಲಿ ನಡೆದ ರಮಝಾನ್ ಕಾರ್ಯಕ್ರಮ ಹಾಗೂ ಸಾಮೂಹಿಕ ಇಪ್ತಾರ್ ಕೂಟವನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ ಶುಭ ಹಾರೈಸಿದರು. ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ಸಂಸ್ಥೆಯ ಅನಾಥ ಹಾಗೂ ನಿರ್ಗತಿಕ ಮಕ್ಕಳು ಮತ್ತು ಕುಂಬೋಳ್ ಸಾದತ್ ಗಳ ಸಾನಿಧ್ಯದಲ್ಲಿ ಸಾಮೂಹಿಕ ಇಪ್ತಾರ್ ಕೂಟ ನಡೆಯಿತು.
ಕಾರ್ಯಕ್ರಮದಲ್ಲಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಸದಸ್ಯರಾದ ಅಬೂಬಕ್ಕರ್ ಬರ್ವ, ಶೈಖ್ ಬಳ್ಕುಂಜೆ, ಶಂಶುದ್ದೀನ್ ಬಳ್ಕುಂಜೆ, ಅಬೂಬಕ್ಕರ್ ಅಜಿಲಮೊಗರು, ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಪ್ರತಿನಿಧಿಗಳಾಗಿ ಯೂತ್ ವಿಂಗ್ ಗೌರವಾಧ್ಯಕ್ಷ ಸಯ್ಯದ್ ಸುಹೈಲ್ ತಂಘಳ್ ಆದೂರು, ಅಶ್ರಫ್ ಖಾನ್ , ಮರ್ಕಜ್ ಆಡಳಿತ ಸಮಿತಿಯ ಉಪಾಧ್ಯಕ್ಷ ಬದ್ರುದ್ದೀನ್ ಬಜ್ಪೆ, ಪ್ರಧಾನ ಕಾರ್ಯದರ್ಶಿ ವಿ.ಮುಹಮ್ಮದ್ ಬಜ್ಪೆ, ಕೋಶಾಧಿಕಾರಿ ಎಂ.ಎಚ್.ಬಿ.ಮುಹಮ್ಮದ್, ಕಾರ್ಯದರ್ಶಿ ವೈಬಿಸಿ ಬಶೀರಲಿ ಸದಸ್ಯರಾದ ಹಾಜಬ್ಬ ಅಭಿಮಾನ್, ವೈ.ಅಹಮದ್ ಹಾಜಿ, ಇಶಾಕ್ ಬೊಳ್ಳಾಯಿ, ಮನ್ಹರ್ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.
ಬಿಳಗ್ಗೆ ಮಹಿಳಾ ಆಲಿಮತ್ತಿನಿಂದ ಮಹಿಳೆಯರಿಗಾಗಿ ತರಗತಿ ನಡೆಯಿತು. ಲುಹರ್ ನಮಾಜ್ ಬಳಿಕ ರಮಝನ್ ಪ್ರವಚನ ಕಾರ್ಯಕ್ರಮವನ್ನು ಮೂಳೂರು ಮುದರ್ರಿಸ್ ಅಬ್ದುಲ್ ರಹಿಮಾನ್ ಮದನಿ ಉದ್ಘಾಟಿಸಿದರು. ಅಸರ್ ನಮಾಝಿನ ಬಳಿಕ ನಡೆದ ಜಲಾಲಿಯ ಮಜ್ಲಿಸ್ ಕುಂಬೋಳ್ ಜಾಫರ್ ಸ್ವಾದಿಕ್ ತಂಙಳ್ ನೇತೃತ್ವ ನೀಡಿದರು. ಮರ್ಕಜ್ ಮ್ಯಾನೇಜರ್ ಮುಸ್ತಫ ಸಅದಿ ಸ್ವಾಗತಿಸಿ ವಂದಿಸಿದರು.