ಕಾಪು ಪ್ರೆಸ್‌ಕ್ಲಬ್‌ನಲ್ಲಿ ಇಫ್ತಾರ್‌ಕೂಟ
ಕಾಪು, ಜೂ. 14: ಆಧ್ಯಾತ್ಮಿಕತೆಯನ್ನು ವೃದ್ಧಿಸಿ ಭಗವಂತನ ಕಡೆಗೆ ದೇಹ ಹಾಗೂ ಮನಸ್ಸನ್ನು ಸಜ್ಜುಗೊಳಿಸಲು ಉಪವಾಸ ವೃತ ಸಹಕಾರಿಯಾಗಿದೆ ಎಂದು ಕಾಪು ಜಾಮಿಯಾ ಮಸೀದಿಯ ಉಪಾಧ್ಯಕ್ಷ ಅಮೀರ್ ಹಂಝ ಹೇಳಿದರು.
ಅವರು ಬುಧವಾರ ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾಪು ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬಡತನದ ಅನುಭವದ ಜೊತೆಗೆ ನೈಸರ್ಗಿಕ ಬೇಡಿಕೆಗಳ ಮೇಲೆ ಹಿಡಿತ ಸಾಧಿಸಲು ಮಾಡುವ ಕಠಿಣ ವೃತ. ದೈಹಿಕ, ಮಾನಸಿಕ, ಭೌದ್ಧಿಕ ಆಸೆಗಳನ್ನು ಮೀರಿ ನಡೆಸುವ ವೃತವೇ ರಮ್ಜಾನ್ ಉಪವಾಸ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿಮಾತನಾಡಿ, ಪತ್ರಕರ್ತ ಮಿತ್ರರೆಲ್ಲಾ ಒಗ್ಗಟ್ಟಾಗಿ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ತಮ್ಮೊಳಗಿನ ಸ್ನೇಹ ಬಾಂಧವ್ಯ ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೆ ಉಪವಾಸ ಆಚರಣೆಯ ವಿಶೇಷತೆಯನ್ನು ಅರಿಯಲು ಅವಕಾಶ ಸಿಗುತ್ತದೆ ಎಂದರು.
ಕಾರ್ಯಕ್ರಮದ ವಹಿಸಿದ್ದರು. ಪ್ರೆಸ್‌ಕ್ಲಬ್ ಸದಸ್ಯರಾದ ಅಬ್ದುಲ್ ಹಮೀದ್ ಪಡುಬಿದ್ರೆ, ಅಸಾದುಲ್ಲಾ ಕಟಪಾಡಿ, ಶಫಿ ಉಚ್ಚಿಲ, ಪತ್ರಕರ್ತ ಇರ್ಷಾದ್ ಉಡುಪಿ, ಬಿ.ಪುಂಡಲೀಕ ಮರಾಠೆ, ಕಾರ್ಯದರ್ಶಿ ಕರುಣಾಕರ ನಾಯಕ್, ಕೋಶಾಧಿಕಾರಿ ಸಂತೋಷ್ ನಾಯ್ಕಿ ವೇದಿಕೆಯಲ್ಲಿದ್ದರು.