5,000 ಸಿರಿಯಾ ನಿರಾಶ್ರಿತರಿಗೆ ರಮಝಾನ್ ಆಹಾರ ಒದಗಿಸುತ್ತಿರುವ ಸಿಖ್ಖರು

Update: 2018-06-14 13:20 GMT

ಬೇರೂತ್, ಜೂ.14: ಲೆಬನಾನ್ ಮತ್ತು ಇರಾಕ್ ನಲ್ಲಿರುವ ಸಿರಿಯನ್ ನಿರಾಶ್ರಿತರಿಗೆ ಇಫ್ತಾರ್ ಆಹಾರವನ್ನು ಒದಗಿಸುವ ಕೈಂಕರ್ಯವನ್ನು ಇಂಗ್ಲೆಂಡ್ ಮೂಲದ ಅಂತಾರಾಷ್ಟ್ರೀಯ ಎನ್‍ಜಿಒ ಖಾಲ್ಸಾ ಏಯ್ಡ್ ಮಾಡುತ್ತಿದೆ.  ಲೆಬನಾನ್ ಚಾರಿಟಿ ಸಂಸ್ಥೆ ಸವಾ ಫಾರ್ ಡೆವಲೆಪ್ಮೆಂಟ್ ಆ್ಯಂಡ್ ಏಯ್ಡ್ ಸಹಯೋಗದಿಂದ ಈ ಮಾನವೀಯ ಸೇವೆ ನಡೆಯುತ್ತಿದೆ.

ತಮ್ಮ ರಮಝಾನ್ ಕಿಚನ್ ಮೂಲಕ ಸವಾ ಫಾರ್ ಡೆವಲೆಪ್ಮೆಂಟ್ ಆ್ಯಂಡ್ ಏಯ್ಡ್ ಹಾಗು ಖಾಲ್ಸಾ ಏಯ್ಡ್ ಪ್ರತಿ ದಿನ 5,000ಕ್ಕೂ ಮಿಕ್ಕಿ ಸಿರಿಯಾದ ನಿರಾಶ್ರಿತರಿಗೆ ಆಹಾರವೊದಗಿಸುತ್ತಿದೆ. ಈ ರಮಝಾನ್ ಕಿಚನ್ ಕಳೆದ ಐದು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ದಾನಿಗಳ ಸಹಾಯದಿಂದ ನಡೆಯುತ್ತಿದೆ.

ತವರು ದೇಶದಲ್ಲಿ ದೌರ್ಜನ್ಯಕ್ಕೆ ಹೆದರಿ ಇತರ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿರುವ ಸಿರಿಯಾದ ನಿರಾಶ್ರಿತರಿಗೆ ಈ ಕಾರ್ಯಕ್ರಮ ವರದಾನವಾಗಿ ಪರಿಣಮಿಸಿದೆ. ಖಾಲ್ಸಾ ಏಯ್ಡ್ ಸಿಕ್ಖ್ ತತ್ವಗಳ ಆಧಾರದಲ್ಲಿ ಕಾರ್ಯಾಚರಿಸುವ ಪ್ರಪ್ರಥಮ ಅಂತಾರಾಷ್ಟ್ರೀಯ ಸಹಾಯ ಸಂಘಟನೆಯಾಗಿದೆ. ಸಂಘಟನೆಯನ್ನು ರವೀಂದರ್ ಸಿಂಗ್ ಅವರು  ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News