'ಕೆಕೆಎಂಎ' ಡ್ರೀಮ್ ಹೌಸ್ ಯೋಜನೆ: 8ನೇ ಮನೆ ಹಸ್ತಾಂತರ
ಮಂಗಳೂರು, ಜೂ.14: ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ (ಕೆಕೆಎಂಎ) ನಿರ್ವಸಿತ ಜನರಿಗಾಗಿ ಮನೆ ನಿರ್ಮಿಸಿ ಕೊಡುವ ಕನಸಿನ ಯೋಜನೆಯ ಅಡಿಯಲ್ಲಿ 8ನೆ ಮನೆಯನ್ನು ಗುರುವಾರ ವಿಧವೆಯೊಬ್ಬರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಕೆಕೆಎಂಎಯ ಪೋಷಕರಾದ ಸಗೀರ್ ತ್ರಿಕರಿಪುರಂ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ವಾಸ್‌ಲೇನ್ ಸಮೀಪದ ಇಹ್ಸಾನ್ ಮಸೀದಿಯ ಖತೀಬ್ ಮೌಲಾನಾ ತಯ್ಯುಬ್ ಉಸ್ತಾದ್ ಖಾತಿಬ್ ಅವರು ದುವಾ ನೆರವೇರಿಸಿದರು. ಕೆಕೆಎಂಎ ರಾಜ್ಯ ಸಮಿತಿಯ ಅಧ್ಯಕ್ಷರಾದ ಎಸ್.ಎಂ. ಫಾರೂಕ್ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
ಬಿಡಬ್ಲ್ಯೂಎಫ್ ಅಬುಧಾಬಿಯ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಹಾಗೂ ಕೆಕೆಎಂಎಯ ಹಿರಿಯ ನಾಯಕ ಹಾಗೂ ಸಲಹೆಗಾರ ಎಸ್.ಎಂ. ಬಶೀರ್ ಅವರು ಈ ಸಂದರ್ಭ ಮಾತನಾಡಿ, ಅಭಿನಂದಿಸಿದರು.
ಎಸ್.ಎಂ. ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಬಾಷಾ, ಎ.ಕೆ. ಗ್ರೂಪ್‌ನ ನಿರ್ದೇಶಕ ಎ.ಕೆ. ನೌಶಾದ್, ಎ.ಕೆ. ಗ್ರೂಪ್‌ನ ನಿರ್ದೇಶಕ ಎ.ಕೆ. ಸಾಜಿದ್, ಕೆಕೆಎಂಎ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಯೂಸುಫ್ ರಶೀದ್, ಜುಬೈಲ್ ಸ್ಟಾರ್ ಕಾಂಟ್ರಾಕ್ಟಿಂಗ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಅಕ್ಬರ್, ಕೆಕೆಎಂಎ ವಲಯ ಚಾರಿಟಿ ಉಪಾಧ್ಯಕ್ಷ ಆಯುಬ್ ಸೂರಿಂಜೆ, ರಹೀಮ್ ಜೋಕಟ್ಟೆ, ರಿಯಾಝ್ ಅಹ್ಮದ್, ಕೆಕೆಎಂಎ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಫಿ ಈ ವೇಳೆ ಉಪಸ್ಥಿತರಿದ್ದರು.