×
Ad

ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಎಐಐಎಂಎಸ್‌ಗೆ ದಂಡ ವಿಧಿಸಿದ ನ್ಯಾಯಾಲಯ

Update: 2018-06-14 22:52 IST

ಹೊಸದಿಲ್ಲಿ, ಜೂ.14: ಆಧಾರ್ ಕಾರ್ಡ್‌ಅನ್ನು ಸ್ಕಾನ್ ಮಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬನಿಗೆ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡದ ಕಾರಣಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯವು ಎಐಐಎಂಎಸ್‌ಗೆ 50,000 ರೂ. ದಂಡ ವಿಧಿಸಿದೆ ಹಾಗೂ ಭವಿಷ್ಯದಲ್ಲಿ ಇಂಥ ಪ್ರಮಾದಗಳು ನಡೆಯದಂತೆ ನೋಡಕೊಳ್ಳಲು ನಿರ್ದೇಶ ನೀಡಿದೆ.

ಎಐಐಎಂಎಸ್ ಪರೀಕ್ಷೆಗಳನ್ನು ನಿಯಂತ್ರಕರು ಅನಗತ್ಯವಾಗಿ ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯಲು ಅವಕಾಶ ನೀಡದೆ ಮೊಂಡುತನವನ್ನು ಪ್ರದರ್ಶಿಸಿದ್ದಾರೆ ಎಂದು ನ್ಯಾಯಾಲಯ ದೂರಿದೆ. ವಿದ್ಯಾರ್ಥಿ ಪ್ರವೇಶ ಪರೀಕ್ಷೆ ಬರೆಯದಂತೆ ತಡೆಯುವ ಮೂಲಕ ಆತನ ಭವಿಷ್ಯದ ಮೇಲೆ ಪರಿಣಾಮ ಬೀಳುತ್ತದೆ. ಇಂಥ ಘಟನೆಗಳನ್ನು ಎಂಥ ಪರಿಸ್ಥಿತಿಯಲ್ಲೂ ತಡೆಯಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಆದರೆ ಮರುಪರೀಕ್ಷೆ ನಡೆಸಲು ಆದೇಶ ನೀಡಲು ನಿರಾಕರಿಸಿರುವ ನ್ಯಾಯಾಲಯ ಇದರಿಂದ ಈಗಾಗಲೇ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜೊತೆಗೆ ಇತರ ವಿದ್ಯಾರ್ಥಿಗಳ ಮೇಲೆ ಇನ್ನೊಂದು ಪರೀಕ್ಷೆಯ ಅನಗತ್ಯ ಹೊರೆಯನ್ನು ಹೊರಿಸುವುದು ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News