ಕಾಶ್ಮೀರದಲ್ಲಿ ಕದನ ವಿರಾಮ ಈದ್ ವರೆಗೆ ಮಾತ್ರ : ಎನ್‌ಎಸ್‌ಎ ಅಜಿತ್ ದೋವಲ್

Update: 2018-06-14 18:14 GMT

ಹೊಸದಿಲ್ಲಿ, ಜೂ. 12: ಕೇಂದ್ರ ಸಚಿವ ರಾಜನಾಥ್ ಸಿಂಗ್ ಘೋಷಿಸಿರುವ ಶಾಂತಿ ಉಪಕ್ರಮಗಳನ್ನು ರಮಝಾನ್ ನಂತರ ವಿಸ್ತರಿಸುವುದಿಲ್ಲ. ಈ ಶಾಂತಿ ಉಪಕ್ರಮಗಳು ಈದ್‌ನೊಂದಿಗೆ ಕೊನೆಗೊಳ್ಳಲಿದೆ. ಕದನ ವಿರಾಮ ಕೇವಲ ಈದ್ ವರೆಗೆ ಮಾತ್ರ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೂಚಿಸಿದ್ದಾರೆ.

ಪವಿತ್ರ ರಮಝಾನ್ ತಿಂಗಳ ಕದನ ವಿರಾಮದ ಸಂದರ್ಭ ಭಯೋತ್ಪಾದನ ಚಟುವಟಿಕೆಗಳು ಹೆಚ್ಚುತ್ತಿವೆ ಹಾಗೂ ಅಮರನಾಥ್ ಯಾತ್ರೆ ಕುರಿತು ಹೊಸದಿಲ್ಲಿಯಲ್ಲಿ ಗೃಹ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ಸ್ಥಿತಿಗತಿ ಬಗ್ಗೆ ಹಿರಿಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ‘‘ಪವಿತ್ರ ಮಾಸವನ್ನು ಅವರು ಶಾಂತಿಯುತವಾಗಿ ಆಚರಿಸುವ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದ ಜನರಿಗೆ ಈ ಸಂದರ್ಭ ಸಮಾಧಾನ ನೀಡಲು ನಾವು ಬಯಸಿದ್ದೇವೆ. ಅಲ್ಲದೆ, ರಮಝಾನ್ ಸಂದರ್ಭ ನಾವು ಈ ನಿಲುವಿಗೆ ಬದ್ಧವಾಗಿದ್ದೇವೆ. ಜನರು ಸಂತಸದಿಂದ ರಮಝಾನ್ ಮಾಸ ಆಚರಿಸಿದರೆ, ನಮ್ಮ ಉದ್ದೇಶ ಈಡೇರಿದಂತೆ’’ ಎಂದು ಎನ್‌ಎಸ್‌ಎಯ ಅಜಿತ್ ದೋವಲ್ ಹೇಳಿದ್ದಾರೆ.

ರಮಝಾನ್ ಸಂದರ್ಭ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಗಳನ್ನು ಶೇ. 100ಕ್ಕಿಂತರೂ ಅಧಿಕವಾಗಿರುವುದನ್ನು ಗೃಹ ಸಚಿವಾಲಯ ಸಂಗ್ರಹಿಸಿರುವ ದತ್ತಾಂಶ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News