ಕೋಝಿಕೋಡ್‌ನಲ್ಲಿ ಭಾರೀ ಮಳೆ: ಮಗು ಸಹಿತ ನಾಲ್ವರ ಸಾವು; 10 ಮಂದಿ ನಾಪತ್ತೆ

Update: 2018-06-14 18:20 GMT

ಕೋಝಿಕೋಡ್, ಜೂ. 14: ಕೋಝಿಕೋಡ್‌ನಲ್ಲಿ ಸುರಿದ ಭಾರೀ ಮಳೆಗೆ ಬೆಟ್ಟ ಪ್ರದೇಶಗಳಲ್ಲಿ ಹಲವು ಭೂಕುಸಿತ ಸಂಭವಿಸಿದ್ದು, ಮಗು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.

ಬೆಟ್ಟ ಪ್ರದೇಶವಾದ ಕರಿಂಚೋಲದಲ್ಲಿ 9 ತಿಂಗಳ ಮಗು ಮೃತಪಟ್ಟಿದೆ ಹಾಗೂ 10 ಮಂದಿ ಕಾಣೆಯಾಗಿದ್ದಾರೆ. ಹಲವು ಮನೆಗಳು ಕುಸಿದಿವೆ. ಪ್ರವಾಹಕ್ಕೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಭೂಕುಸಿತ ಹಾಗೂ ನೆರೆಯಿಂದ ಇನ್ನಷ್ಟು ಜನರು ನಾಪತ್ತೆಯಾಗಿರುವ ಸಾಧ್ಯತೆ ಇದೆ.

ಬೆಟ್ಟ ಸಂಪೂರ್ಣ ಕುಸಿದ ಪರಿಣಾಮ ಹಲವು ಮನೆ ಹಾಗೂ ರಸ್ತೆಗಳ ಮಣ್ಣಿನಲ್ಲಿ ಹೂತು ಹೋಯಿತು. ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಹೊರ ತೆಗೆಯಲಾಯಿತು. ಇತರ ನಾಲ್ವರನ್ನು ರಕ್ಷಿಸಲಾ ಯಿತು ಎಂದು ಕೋಝಿಕೋಡ್ ಸಂಸದ ಎಂ.ಕೆ. ರಾಘವನ್ ತಿಳಿಸಿದ್ದಾರೆ.

ಈ ನಡುವೆ ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಗುರುವಾರ ರಜೆ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News