ಮಾಲ್ದೀವ್ಸ್: ಮಾಜಿ ಅಧ್ಯಕ್ಷ, ಮುಖ್ಯ ನ್ಯಾಯಾಧೀಶರಿಗೆ ಜೈಲು

Update: 2018-06-14 18:41 GMT

ಮಾಲೆ (ಮಾಲ್ದೀವ್ಸ್), ಜೂ. 14: ನ್ಯಾಯಕ್ಕೆ ತಡೆ ಒಡ್ಡಿದ ಪ್ರಕರಣದಲ್ಲಿ ಮಾಲ್ದೀವ್ಸ್‌ನ ನ್ಯಾಯಾಲಯವೊಂದು ಬುಧವಾರ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್, ಹಾಲಿ ಮುಖ್ಯ ನ್ಯಾಯಾಧೀಶ ಮತ್ತು ಸುಪ್ರೀಂ ಕೋರ್ಟ್‌ನ ಇನ್ನೋರ್ವ ನ್ಯಾಯಾಧೀಶರನ್ನು ತಪ್ಪಿತಸ್ಥರು ಎಂಬುದಾಗಿ ಘೋಷಿಸಿದೆ ಹಾಗೂ ಅವರಿಗೆ 19 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

4 ಲಕ್ಷ ಜನಸಂಖ್ಯೆಯ ದೇಶದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳ ಮುಂದುವರಿದ ಭಾಗ ಇದಾಗಿದೆ.

ಬಂಧನದಲ್ಲಿರುವ ಪ್ರತಿಪಕ್ಷ ನಾಯಕರನ್ನು ಬಿಡುಗಡೆ ಮಾಡುವಂತೆ ಹಾಗೂ ಅಮಾನ್ಯಗೊಂಡ ಸಂಸದರ ಸದಸ್ಯತ್ವವನ್ನು ಮರಳಿಸುವಂತೆ ಸುಪ್ರೀಂ ಕೋರ್ಟ್ ಫೆಬ್ರವರಿಯಲ್ಲಿ ನೀಡಿದ ತೀರ್ಪಿನ ಬಳಿಕ ಹಿಂದೂ ಮಹಾ ಸಾಗರದ ದ್ವೀಪ ರಾಷ್ಟ್ರದಲ್ಲಿ ಹಲವು ಬೆಳವಣಿಗೆಗಳು ಸಂಭವಿಸಿವೆ.

ದೇಶದ ಅಧ್ಯಕ್ಷ ಅಬ್ದುಲ್ಲಾ ಯಮೀನ್ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ತೀರ್ಪು ನೀಡಿದ ನ್ಯಾಯಾಧೀಶರು ಹಾಗೂ ಮಾಜಿ ಅಧ್ಯಕ್ಷರನ್ನು ಬಂಧಿಸಿದ್ದರು.

ಬುಧವಾರ ತೀರ್ಪು ನೀಡಿದ ನ್ಯಾಯಾಲಯವು ಅವರಿಗೆ ತಲಾ 19 ತಿಂಗಳು ಮತ್ತು 6 ದಿನಗಳ ಜೈಲು ಶಿಕ್ಷೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News