ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್ಸು ಪಲ್ಟಿ!
Update: 2018-06-15 11:12 IST
ಚಿಕ್ಕಮಗಳೂರು, ಜೂ.15: ಚಾಲಕನ ನಿಯಂತ್ರಣ ಕೆಎಸ್‌ಆರ್‌ಟಿಸಿ ಬಸ್ಸು ಪಲ್ಟಿಯಾಗಿ 20 ಮಂದಿ ಗಾಯಗೊಂಡ ಘಟನೆ ಎನ್.ಆರ್.ಪುರ ತಾಲೂಕಿನ ಗುಡ್ಡೆಹಳ್ಳ ಬಳಿ ಸಂಭವಿಸಿದೆ. ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿಯ ಸ್ಪೀಪರ್ ಬಸ್ ದುರ್ಘಟನೆಗೀಡಾಗಿದ್ದು, ಗಾಯಾಳುಗಳನ್ನು ಎನ್.ಆರ್.ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.