ಎಲಿಮಲೆಯಲ್ಲಿ ಈದುಲ್ ಫಿತ್ರ್
Update: 2018-06-15 12:41 IST
ಸುಳ್ಯ, ಜೂ.15: ತಾಲೂಕಿನ ಎಲಿಮಲೆ ಬದ್ರಿಯಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ 8 ಗಂಟೆಯಿಂದಲೇ ಮಸೀದಿಯಲ್ಲಿ ಒಟ್ಟು ಸೇರಿದ ವಿಶ್ವಾಸಿಗಳು ತಕ್ಬೀರ್ ಧ್ವನಿಯೊಂದಿಗೆ ಅಲ್ಲಾಹನನ್ನು ಪ್ರಾರ್ಥಿಸಿದರು. ಎಲಿಮಲೆ ಮುದರ್ರಿಸ್ ಅಬ್ದುಲ್ ರಝಾಕ್ ಸಖಾಫಿ ಖುತ್ಬಾ ನಿರ್ವಹಿಸಿ ಈದ್ ಸಂದೇಶ ನೀಡಿದರು. ಎಲಿಮಲೆ ಮದ್ರಸ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿಯವರ ನೇತ್ರತ್ವದಲ್ಲಿ ಕಬರ್ ಝಿಯಾರತ್ ನಡೆಯಿತು.
ಸೇರಿದವರು ಪರಸ್ಪರ ಹಸ್ತಲಾಘವ ನೀಡಿ ಆಲಂಗಿಸಿ ಹಬ್ಬದ ಶುಭಾಶಯಗಳನ್ನು ಹಂಚಿ ಸಂಭ್ರಮಿಸಿದರು. ಈ ವರ್ಷ ಶುಕ್ರವಾರದಂದು ಹಬ್ಬವಾದ ಕಾರಣ ಶುಕ್ರವಾರದ ವಿಶೇಷ ಪ್ರಾರ್ಥನೆ ಕೂಡಾ ಹಬ್ಬಕ್ಕೆ ವಿಶೇಷ ಮೆರುಗು ನೀಡಿದೆ.