ಪೊಳಲಿ ದೇವಿಯ ಮೊರೆ ಹೋದ ಮಾಜಿ ಸಚಿವ ರಮಾನಾಥ ರೈ

Update: 2018-06-15 08:21 GMT

ಮಂಗಳೂರು, ಜೂ.15: ತಾಲೂಕಿನ ಪೊಳಲಿಯ ರಾಜರಾಜೇಶ್ವರಿ ದೇವಾಲಯಕ್ಕೆ ನೀಡಲಾದ ಕೊಡಿಮರಕ್ಕೆ ಸಂಬಂಧಿಸಿದಂತೆ ಅಪಪ್ರಚಾರವಾಗುತ್ತಿರುವುದಾಗಿ ನೊಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಇಂದು ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ದೇವಾಲಯದ ಜೀರ್ಣೋದ್ಧಾರ ವೇಳೆ ದೇವಾಲಯದ ಮುಂಭಾಗದಲ್ಲಿ ಕೊಡಿಮರವನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲದ ಮುಂಭಾದಲ್ಲಿ ಕೊಡಿಮರವನ್ನು ಧ್ವಜಸ್ತಂಭವಾಗಿ ಬಳಸಲಾಗುತ್ತದೆ.
ಧ್ವಜಸ್ತಂಭಕ್ಕಾಗಿ ಅರಣ್ಯ ಇಲಾಖೆಯ ಬೆಲೆಬಾಳುವ ಮರವನ್ನು ಕಡಿಯಲಾಗಿತ್ತು. ಮರಕ್ಕೆ ಅರಣ್ಯ ಇಲಾಖೆಯು 21 ಲಕ್ಷ ರೂಪಾಯಿ ಶುಲ್ಕ ವಿಧಿಸಿತ್ತು.
ಪೊಳಲಿ ದೇವಸ್ಥಾನದ ಗೌರವಾಧ್ಯಕ್ಷರಾಗಿದ್ದ ರಮಾನಾಥ ರೈಯವರು ಈ ಹಿಂದೆ ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದ ಕೊಡಿಮರಕ್ಕೆ ಶುಲ್ಕ ವಿಧಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರು ವ್ಯವಸ್ಥಿತವಾಗಿ ಅಪಪ್ರಚಾರಗೈದಿದ್ದರು. ಕೊಡಗಿನ ಸಂಪಾಜೆ ಅರಣ್ಯದಿಂದ ಮರವನ್ನು ಕಡಿದು ತರಲಾಗಿತ್ತು.
 ಪೊಳಲಿ ದೇವಸ್ಥಾನದಲ್ಲಿ ಇಂದು ಪೂಜೆ ಸಲ್ಲಿಸಿ ‘ನಾನೇನೂ ತಪ್ಪು ಮಾಡಿಲ್ಲ. ಹಾಗಿದ್ದರೂ ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಹೇಳುತ್ತಾ ಸಚಿವ ರೈ ಕಣ್ಣೀರಿಟ್ಟರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News