ಈದುಲ್ ಫಿತ್ರ್ : ಜಾಮಿಯಾ ಮಸ್ಜಿದ್ ಬೆಳುವಾಯಿ ವತಿಯಿಂದ ಸೌಹಾರ್ದ ಕೂಟ
Update: 2018-06-15 19:21 IST
ಮೂಡುಬಿದಿರೆ, ಜೂ. 15: ಈದುಲ್ ಫಿತ್ರ್ ಅಂಗವಾಗಿ ಬೆಳುವಾಯಿ ಜಾಮಿಯಾ ಮಸ್ಜಿದ್ ವತಿಯಿಂದ ಶುಕ್ರವಾರ ಸೌಹಾರ್ದ ಕೂಟ ನಡೆಯಿತು.
ಬೆಳುವಾಯಿ ಜಮಾಅತ್ ನಿಂದ ಈ ಸೌಹಾರ್ದ ಕೂಟ ಏರ್ಪಡಿಸಲಾಗಿತ್ತು. ದಾರಿಯಲ್ಲಿ ಹೋಗುವ ಎಲ್ಲರಿಗೂ ಈದುಲ್ ಫಿತ್ರ್ ವತಿಯಿಂದ ಸೌಹಾರ್ದ ಕೂಟವಾಗಿ ಪಾನೀಯ ಹಾಗು ಸಿಹಿ ತಿಂಡಿ ವಿತರಿಸಲಾಯಿತು.
ಈ ಸಂದರ್ಭ ಜಮಾಅತಿನ ಹಲವರು ಉಪಸ್ಥಿತರಿದ್ದು, ಸೌಹಾರ್ದ ಕೂಟಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.