ಕ್ರಿಸ್ಟಿಯಾನೊ ರೊನಾಲ್ಡೊ ಹ್ಯಾಟ್ರಿಕ್: ಸ್ಪೇನ್ ಜತೆ ಡ್ರಾ ಸಾಧಿಸಿದ ಪೋರ್ಚ್‌ಗೀಸ್

Update: 2018-06-16 04:34 GMT

ಸೋಚಿ (ರಷ್ಯಾ), ಜೂ. 16: ಪೋರ್ಚ್‌ಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ 2018ರ ಫಿಫಾ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಸಾಧಿಸಿ, ಗ್ರೂಪ್ ಬಿ ಪಂದ್ಯದಲ್ಲಿ ಸ್ಪೇನ್ ವಿರುದ್ಧ 3-3 ಡ್ರಾ ಸಾಧಿಸಲು ನೆರವಾದರು.

ಕೊನೆಕ್ಷಣದಲ್ಲಿ ಮಿಂಚಿನ ಹ್ಯಾಟ್ರಿಕ್ ಸಾಧಿಸಿದ ರೊನಾಲ್ಡೊ ರೋಚಕ ಡ್ರಾ ಸಾಧಿಸಿದರು.

ಸ್ಪೇನ್‌ನ ಮುನ್ಪಡೆ ಆಟಗಾರ ಡಿಗೊ ಕೋಸ್ಟಾ ಇದಕ್ಕೂ ಮುನ್ನ ಎರಡು ಗೋಲು ಹೊಡೆದು 3-2 ಮುನ್ನಡೆಗೆ ಕಾರಣರಾಗಿದ್ದರು. ನಾಲ್ಕು ವಿಶ್ವಕಪ್‌ಗಳಲ್ಲಿ ಗೋಲು ಸಾಧಿಸಿದ ಉವೇ ಸೀಲೆರ್, ಪೀಲೆ ಹಾಗೂ ಮಾರೊಸ್ಲೋವ್ ಕ್ಲೋಸ್ ಅವರ ಸಾಧನೆಯನ್ನು ರೊನಾಲ್ಡೊ ಸರಿಗಟ್ಟಿದರು. ಸತತ ನಾಲ್ಕು ಯುರೋಪಿಯನ್ ಚಾಂಪಿಯನ್‌ಶಿಪ್ ಟೂರ್ನಿಗಳಲ್ಲೂ ಗೋಲು ಸಾಧಿಸಿದ ಹೆಗ್ಗಳಿಕೆ ಅವರದ್ದು.

ಬುಧವಾರವಷ್ಟೇ ಕೋಚ್ ಜೂಲೆಎನ್ ಲೊಪೆಟೆಗ್ಯು ಅವರನ್ನು ವಜಾ ಮಾಡಿದ ಆಘಾತದಿಂದ ಚೇತರಿಸಿಕೊಳ್ಳದ ಸ್ಪೇನ್, ಪೂರ್ಣ ಅಂಕ ಗಳಿಸಲು ವಿಫಲವಾಯಿತು. ರಿಯಲ್ ಮ್ಯಾಡ್ರಿಡ್ ಜತೆಗೆ ಫೆಡರೇಷನ್ ಗಮನಕ್ಕೆ ಬಾರದೇ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಿ ಫೆರ್ನಾಡೊ ಹೀರ್ರೊ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿತ್ತು.

ರೊನಾಲ್ಡೊ ಅವರು ನಾಲ್ಕನೇ ನಿಮಿಷದಲ್ಲೇ ಆಕರ್ಷಕ ಗೋಲು ಗಳಿಸಿ ಸ್ಫೋಟಕ ಆರಂಭ ನೀಡಿದರು. ಆದರೆ ಕೋಸ್ಟಾ 24ನೇ ನಿಮಿಷದಲ್ಲಿ ಸರಿಗಟ್ಟಿದರು. ಇಸ್ಕೊ ಮತ್ತೊಂದು ಗೋಲು ಹೊಡೆದು ಸ್ಪೇನ್‌ಗೆ ಮುನ್ನಡೆ ಸಾಧಿಸಿದರು. ಆದರೆ ಮೊದಲಾರ್ಧದ ಒಂದು ನಿಮಿಷ ಮೊದಲು ರೊನಾಲ್ಡೊ ಮಿಂಚಿನ ಗೋಲು ಹೊಡೆದು ಸಮಬಲ ಸಾಧಿಸಲು ನೆರವಾದರು. ಮತ್ತೆ 10 ನಿಮಿಷಗಳಲ್ಲಿ ಕೋಸ್ಟಾ ಸ್ಪೇನ್‌ಗೆ ಮುನ್ನಡೆ ಒದಗಿಸಿದರು. ಅಂತಿಮವಾಗಿ 88ನೇ ನಿಮಿಷದಲ್ಲಿ 20 ಮೀಟರ್ ದೂರದಿಂದ ಗೋಲು ಪೆಟ್ಟಿಗೆಗೆ ಚೆಂಡು ಸೇರಿಸಿದ ರೊನಾಲ್ಡೊ ಡ್ರಾ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News