​ಭಾರತೀಯ ಬ್ಯಾಂಕ್‌ಗಳಿಗೆ 2 ಲಕ್ಷ ಪೌಂಡ್ ಪಾವತಿಸಿ: ಮಲ್ಯಗೆ ಬ್ರಿಟನ್ ಕೋರ್ಟ್ ಆದೇಶ

Update: 2018-06-16 04:57 GMT

ಲಂಡನ್, ಜೂ. 16: ಭಾರತದ 13 ಬ್ಯಾಂಕ್‌ಗಳಿಗೆ ಬಹುಕೋಟಿ ವಂಚಿಸಿ ಬ್ರಿಟನ್ ಸೇರಿರುವ ಮದ್ಯ ದೊರೆ ವಿಜಯ್ ಮಲ್ಯ ಅವರಿಗೆ ಅಲ್ಲೂ ಸಂಕಷ್ಟ ಎದುರಾಗಿದೆ. ಕಾನೂನು ವೆಚ್ಚವಾಗಿ ತಕ್ಷಣ 2 ಲಕ್ಷ ಪೌಂಡ್ ಪಾವತಿಸುವಂತೆ ಮಲ್ಯ ಅವರಿಗೆ ಬ್ರಿಟನ್ ಹೈಕೋರ್ಟ್ ಸೂಚಿಸಿದೆ.

ವಿಶ್ವಾದ್ಯಂತ ಇರುವ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಭಾರತದ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆ ನೀಡಲು ಕಳೆದ ತಿಂಗಳು ನ್ಯಾಯಮೂರ್ತಿ ಆಂಡ್ರೂ ಹೆನ್ಷಾ ಅವರು ನಿರಾಕರಿಸಿದ್ದರು. 1.145 ಶತಕೋಟಿ ಪೌಂಡ್ ಮೊತ್ತವನ್ನು ವಸೂಲಿ ಮಾಡಿಕೊಳ್ಳಲು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ನ್ಯಾಯಮೂರ್ತಿ ಅನುಮತಿ ನೀಡಿದ್ದರು.

ವಿಶ್ವವ್ಯಾಪಿ ಮುಟ್ಟುಗೋಲು ಆದೇಶದ ರಿಜಿಸ್ಟ್ರೇಷನ್ ಮತ್ತು ಕರ್ನಾಟಕದ ಸಾಲ ವಸೂಲಾತಿ ನ್ಯಾಯ ಮಂಡಳಿಯ ಆದೇಶದ ರಿಜಿಸ್ಟ್ರೇಷನ್‌ಗೆ ತಗಲುವ ವೆಚ್ಚವನ್ನು ಪಾವತಿಸುವಂತೆಯೂ ನ್ಯಾಯಾಲಯ ಆದೇಶ ನೀಡಿದೆ.

"ಬ್ಯಾಂಕುಗಳ ವೆಚ್ಚವನ್ನು ಭರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಬಾಕಿ ಪಾವತಿಸಬೇಕಾಗಿರುವ ವ್ಯಕ್ತಿ ಪಾವತಿಸದಿದ್ದರೆ, ಈ ವೆಚ್ಚವನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News