'ಗ್ರೀನ್ ಲoಗರ್ಸ್' ವತಿಯಿಂದ ವೆನ್ಲಾಕ್ ಇನ್ಫೋಸಿಸ್ ಮಕ್ಕಳ ಚಿಕಿತ್ಸಾ ಕೇಂದ್ರದಲ್ಲಿ ಔತಣಕೂಟ, ಡ್ರಾಯಿಂಗ್ ಕಿಟ್ ವಿತರಣೆ
ಮಂಗಳೂರು, ಜೂ. 16: ನಗರದ ವೆನ್ಲಾಕ್ ಇನ್ಫೋಸಿಸ್ ಮಕ್ಕಳ ಚಿಕಿತ್ಸಾ ಕೇಂದ್ರದಲ್ಲಿ ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ 'ಗ್ರೀನ್ ಲoಗರ್ಸ್' ಸಂಸ್ಥೆಯ ವತಿಯಿಂದ ಔತಣಕೂಟ ಹಾಗೂ ಮಕ್ಕಳಿಗೆ ಡ್ರಾಯಿಂಗ್ ಕಿಟ್ ವಿತರಣೆ ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಗ್ರೀನ್ ಲಾಂಗರ್ಸ್ ಸಂಸ್ಥೆ ವೆನ್ಲಾಕ್ ಇನ್ಫೋಸಿಸ್ ಮಕ್ಕಳ ಚಿಕಿತ್ಸಾ ಕೇಂದ್ರದಲ್ಲಿ ರೋಗಿಯ ಕುಟುಂಬಗಳಿಗೆ ನಿರಂತರವಾಗಿ ಭೋಜನೆ ವಿತರಿಸುತ್ತಾ ಬಂದಿದೆ. ಶುಕ್ರವಾರ ವಿಶೇಷವಾಗಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.
ಕಾರ್ಯಕ್ರಮದಲ್ಲಿ ವೆಜ್ ಬಿರಿಯಾನಿ, ಪಾಯಸ ವಿತರಿಸಲಾಯಿತು ಹಾಗೂ ವಿಶೇಷವಾಗಿ ಮಕ್ಕಳಿಗೆ ಡ್ರಾಯಿಂಗ್ ಪುಸ್ತಕ, ಕ್ರಯೊನ್ಸ್, ಪೆನ್ಸಿಲ್ ಇನ್ನಿತರ ಉಪಯುಕ್ತ ಉಡುಗೊರೆ ನೀಡಿ, ಸೌಹಾರ್ದತೆಯಾಗಿ ಹಬ್ಬ ಆಚರಿಸಲಾಯಿತು.
ಗ್ರೀನ್ ಲಾಂಗರ್ಸ್ ಹಬ್ಬದ ಸಂದರ್ಭ ವೆನ್ಲಾಕ್ ಇನ್ಫೋಸಿಸ್ ಚಿಕಿತ್ಸಾ ಕೇಂದ್ರದಲ್ಲಿ ಮಕ್ಕಳೊಂದಿಗೆ ಆಚರಿಸಿತು. ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿತು ಹಾಗೂ ಮಕ್ಕಳ ಚಿಕಿತ್ಸಾ ಕೇಂದ್ರದಲ್ಲಿ ಸೌಹಾರ್ದತೆ ಆಚರಣಿಗೆ ಮುಂದಾದ ಗ್ರೀನ್ ಲಾಂಗರ್ಸ್ ಸಂಸ್ಥೆಯ ಈ ವಿನೂತನ ಕಾರ್ಯಕ್ರಮ ಭಾರಿ ಪ್ರಶಂಸೆಗೆ ಪಾತ್ರವಾಯಿತು.